ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (1 ರಿಂದ 10ನೇ ತರಗತಿ ವರೆಗೆ ) ದಸರಾ ರಜೆ ವಿಸ್ತರಿಸಲಾಗಿದೆ,ಅ.22 ರಂದು ರಜೆ ಘೋಷಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅದೇಶಿಸಿದ್ದಾರೆ. ದಸರಾ ಹಬ್ಬದ ಪೂಜೆ ಮತ್ತು ಮೆರವಣಿಗೆಯ ಅಂತಿಮ ದಿನವಾಗಿರುವುದರಿಂದ ರಾತ್ರಿ ವೇಳೆ ಪೂಜೆ ಮತ್ತು
ಮೆರವಣಿಗೆ ಇರುತ್ತದೆ. ಈ ಮೆರವಣಿಗೆಗೆ ಅಸಂಖ್ಯ ಮಕ್ಕಳು ಪೋಷಕರು ಪಾಲ್ಗೊಳ್ಳುತ್ತಾರೆ. ದೂರದ ಜಿಲ್ಲೆಗಳಿಗೆ ತೆರಳಿರುವ ಮಕ್ಕಳು ಮತ್ತು ಪೋಷಕರು ಬಂದು ತಲುಪಲು ವಿಳಂಬ ವಾಗುವುದರಿಂದ. ಮರುದಿನ ಅಂದರೆ ಅ.22ರಂದು ಶಾಲೆ ಪುನರಾರಂಭವಾಗುವುದರಿಂದ ಮಕ್ಕಳು ಶಾಲೆಗೆ ಹಾಜರಾಗುವುದು ಕಷ್ಟ ಸಾಧ್ಯ, ಆದುದರಿಂದ ಅ.21ರ ತನಕ ಇದ್ದ ದಸರಾ ರಜೆಯನ್ನು ಒಂದು ದಿನ ಹೆಚ್ಚುವರಿಯಾಗಿ ವಿಸ್ತರಿಸಬೇಕೆಂದು ಪೋಷಕರು, ಸಾರ್ವಜನಿಕರು ಮನವಿ ಮಾಡಿಕೊಂಡಿರುತ್ತಾರೆ. ಈ ಮನವಿಯನ್ನು ಸ್ವೀಕರಿಸಿ ಪರಿಶೀಲಿಸಿ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ ಇವರ ಗಮನಕ್ಕೆ ತಂದು ಇವರೊಂದಿಗೆ ಸಮಾಲೋಚಿಸಿ ದಸರಾ ರಜೆಯನ್ನು ಒಂದು ದಿನ ಹೆಚ್ಚುರಿಯಾಗಿ ವಿಸ್ತರಿಸಿ ಅ.22 ವರೆಗೆ ದಸರಾ ರಜೆ ಅವಧಿ ಎಂದು ಆದೇಶಿಸಲಾಗಿದೆ. ಹೆಚ್ಚುವರಿಯಾಗಿ ಘೋಷಿಸಿದ ಒಂದು ದಿನ ದಸರಾ ರಜೆ ಅವಧಿಯನ್ನು ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ವಿವೇಚನೆಯಲ್ಲಿ ನೀಡಲಾದ 4 ಸ್ಥಳೀಯ ರಜೆಗಳ ಪೈಕಿ 01 ಸ್ಥಳೀಯ ರಜೆಯನ್ನು ಬಳಸಿಕೊಂಡು ಸರಿದೂಗಿಸುವಂತೆ ಉಪನಿರ್ದೇಶಕರು
ಆದೇಶದಲ್ಲಿ ತಿಳಿಸಿದ್ದಾರೆ.










