ಸುಳ್ಯ:ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು,ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ 55ನೇ ವರ್ಷದ ಶ್ರೀ ಶಾರದಾಂಬ ಉತ್ಸವ ‘ಸುಳ್ಯ ದಸರಾ’ಕ್ಕೆ ಅ.16ರಂದು ಚಾಲನೆ ದೊರೆತಿದೆ. ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶಾರದಾಂಬಾ ಕಲಾ ವೇದಿಕೆಯಲ್ಲಿ
ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆಯುವುದರ ಮೂಲಕ 9 ದಿನಗಳ ಕಾಲ ನಡೆಯುವ ದಸರಾಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಶಾತದಾಂಬಾ ವೇದಿಕೆಯವರೆಗೆ ಶ್ರೀ ಶಾರದಾ ದೇವಿಯ ಪ್ರತಿಷ್ಠಾ ಮೆರವಣಿಗೆ ನಡೆದು ಪೂ. 11.02ಕ್ಕೆ ಪ್ರತಿಷ್ಠೆ ನಡೆಯಿತು.ಪುರೋಹಿತ ನಾಗರಾಜ ಭಟ್ ಹಾಗೂ ಸುದರ್ಶನ ಭಟ್ ಉಜಿರೆ ನೇತೃತ್ವದಲ್ಲಿ ದೇವಿಯ ಪ್ರತಿಷ್ಠೆ ಹಾಗೂ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ

ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಶಾರದಾಂಬ ಉತ್ಸವ ಸಮಿತಿಯ ಅಧ್ಯಕ್ಷ ಡಾ.ಡಿ.ವಿ.ಲೀಲಾಧರ್,
ಶಾರದಾಂಬಾ ಉತ್ಸವ ಸಮಿತಿಯ ಗೌರವ ಸಲಹೆಗಾರರಾದ ಎನ್.ಜಯಪ್ರಕಾಶ್ ರೈ, ಎನ್.ಎ.ರಾಮಚಂದ್ರ,
ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಕುಲ್ದಾಸ್,ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಖಜಾಂಜಿ ಬೂಡು ರಾಧಾಕೃಷ್ಣ ರೈ, ಶ್ರೀ ಶಾರದಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್,ಮಹಿಳಾ ಸಮಿತಿಯ ಅಧ್ಯಕ್ಷೆ ಲತಾ ಮಧುಸೂಧನ್, ಶ್ರೀ ಶಾರದಾಂಬ ಉತ್ಸವ ಸಮಿತಿಯ

ಕೋಶಾಧಿಕಾರಿ ಗಣೇಶ್ ಆಳ್ವ, ದಸರಾ ಉತ್ಸವ ಸಮಿತಿಯ ಖಜಾಂಜಿ ಸುನಿಲ್ ಕೇರ್ಪಳ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ನ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್, ಕಾರ್ಯದರ್ಶಿ ಎಂ.ಕೆ. ಸತೀಶ್, ಶಾರದಾಂಬ ಉತ್ಸವ ಸಮಿತಿಯ ಕೋಶಾಧಿಕಾರಿ ಬೆಳ್ಯಪ್ಪ ಗೌಡ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ

ವಿಕ್ರಂ.ಎ.ವಿ, ರಾಮಚಂದ್ರ.ಪಿ. ಆಗ್ರೋ, ಪ್ರಭಾಕರನ್ ನಾಯರ್ ಸ್ವಾಗತ್, ಶಿವನಾಥ್ ರಾವ್, ಎಂ.ವೆಂಕಪ್ಪ ಗೌಡ, ರವಿಚಂದ್ರ ಕೊಡಿಯಾಲಬೈಲು, ಚಂದ್ರಶೇಖರ ಪಂಡಿತ್, ವಿನಯ ಬೆದ್ರುಪಣೆ, ಸುರೇಶ್ ಪಂಡಿತ್, ತೀರ್ಥರಾಮ ಜಾಲ್ಸೂರು, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಅನೂಪ್ ಪೈ, ವಿಜಯಕುಮಾರ್ ಪಾತಿಕಲ್ಲು, ವಿಠಲ, ಕುಸುಮಾಧರ ರೈ ಬೂಡು, ಜಿನ್ನಪ್ಪ ಪೂಜಾರಿ, ಪುರುಷೋತ್ತಮ ನಾವೂರು, ಜನಾರ್ಧನ ದೋಳ, ಸತೀಶ್.ಕೆ.ಜಿ, ಜಯಂತ ಕೇರ್ಪಳ, ಪ್ರದೀಪ್, ಶ್ವೇತಾ ಪ್ರಸಾದ್, ಶಿಲ್ಪಾ ಸುದೇವ್, ಸುಪ್ರಿತಾ ನಾರಾಯಣ, ಹರಿಣಿ ರೈ ಮತ್ತಿತರರು ಉಪಸ್ಥಿತರಿದ್ದರು.











