ಚೆನ್ನೈ:ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ 2 ಸಿನಿಮಾ ನೋಡಲು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಮೊನ್ನೆ ತಾನೆ ಬಿಡುಗಡೆಯಾದ ಜೈಲರ್ 2 ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ನೋಡಲು
ಸಂಜು ಅವರು ಇಡೀ ಚಿತ್ರ ಮಂದಿರ ಬುಕ್ ಮಾಡಿದ್ದಾರೆ.ಈ ಬಗ್ಗೆ ಮಾತನಾಡಿರುವ ಅವರು, ‘ದೆಹಲಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಕಾರಣ ಸಿನಿಮಾ ಬಿಡುಗಡೆಯಾದ ದಿನವೇ ನೋಡಲು ಸಾಧ್ಯವಾಗಲಿಲ್ಲ. ಈಗ ಪತ್ನಿ, ಕುಟುಂಬಸ್ಥರು, ಸ್ನೇಹಿತರು, ತಮಿಳು ಗೊತ್ತಿರುವ ಕ್ರಿಕೆಟ್ ಸ್ನೇಹಿತರೊಂದಿಗೆ ಸಿನಿಮಾ ವೀಕ್ಷಿಸಿರುವುದು ತುಂಬಾ ಖುಷಿ ತಂದಿದೆ’ ಎಂದಿದ್ದಾರೆ.
‘ನನಗೆ ರಜನಿಕಾಂತ್ ಅವರ ಸಿನಿಮಾಗಳೆಂದರೆ ಇಷ್ಟ, ಅವರ ಹೊಸ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವುದನ್ನೇ ಕಾಯುತ್ತಿರುತ್ತೇನೆ’ ಎಂದೂ ಹೇಳಿದ್ದಾರೆ.ಸಂಜು ಅವರು ಜೈಲರ್ 2 ಸಿನಿಮಾ ನೋಡಲು ಬೆಂಗಳೂರಿನಲ್ಲಿ ಚಿತ್ರಮಂದಿರವನ್ನು ಬುಕ್ ಮಾಡಿ ಚಿತ್ರ ವೀಕ್ಷಿಸಿದರು.ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದಲ್ಲಿ, ಸನ್ ಪಿಕ್ಚರ್ಸ್ ನಿರ್ಮಿಸಿರುವ ಜೈಲರ್ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. 2023ರಲ್ಲಿ ತೆರೆಕಂಡ ಜೈಲರ್ ಸಿನಿಮಾದ ಮುಂದುವರಿದ ಭಾಗ ಇದಾಗಿದೆ.
ರಜನಿಕಾಂತ್ ಜತೆಗೆ ಬಾಲಿವುಡ್ ನಟ ಹೃತಿಕ್ ರೋಷನ್, ಕನ್ನಡದ ಶಿವರಾಜ್ಕುಮಾರ್, ಮಲಯಾಳಂ ನಟ ಮೋಹನ್ಲಾಲ್,
ಮಿಥುನ್ ಚಕ್ರವರ್ತಿ ಹಾಗೂ ವಿಜಯ್ ಸೇತುಪತಿ ಸೇರಿದಂತೆ ದೊಡ್ಡ ತಾರಾಗಣವೇ ಸಿನಿಮಾದಲ್ಲಿ ಕಾಣಿಸಿಕೊಂಡಿದೆ. ಅಂತಯೇ ವಿನಾಯಕನ್, ರಮ್ಯಾ ಕೃಷ್ಣನ್, ವಿದ್ಯಾಬಾಲನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.










