ಪುತ್ತೂರು:ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯು ಪುತ್ತೂರಿನಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಜೇನು ಸಂಸ್ಕರಣಾ ಘಟಕ ಸ್ಥಾಪಿಸುತ್ತಿದ್ದು, ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೃಷಿ ಅಭಿವೃದ್ದಿ ನಿರ್ವಾಹಕರ
ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರದ ಮಹಿಳಾ ಅಭ್ಯುದಯ ಯೋಜನೆಯಲ್ಲಿ 250 ಹುದ್ದೆಗಳು ಮಂಜೂರಾಗಿದ್ದು ತಿಂಗಳಿಗೆ
ರೂ. 25 ಸಾವಿರ ಗಳಿಸುವ ಅವಕಾಶವಿರುತ್ತದೆ. ಮಾ. 10ರಂದು ಬೆಳಗ್ಗೆ 9.30ರಿಂದ ಸಂಜೆ 5.30ರ ತನಕ ನೇರ ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು Gramajanya Farmers Producer Company Ltd. ಹೆಸರಿನಲ್ಲಿ ರೂ. 250/- ರ ಡಿಮಾಂಡ್ ಡ್ರಾಫ್ಟ್ ಹಾಗೂ ಬಯೋಡೇಟಾದ ಜೊತೆಗೆ ಕಾರ್ಪೊರೇಟ್ ಕಚೇರಿ, ರೋಟರಿ ಬ್ಲಡ್ ಬ್ಯಾಂಕ್ ಬಳಿ, ರಾಧಾ ಕೃಷ್ಣ ಬಿಲ್ಡಿಂಗ್, ಪುತ್ತೂರು, ದ.ಕ.574202 ಈ ವಿಳಾಸಕ್ಕೆ ಖುದ್ದಾಗಿ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿ ಲಿ.,
+91 82514 50434
+91 63601 66490, info@gramajanyafarm.in ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.