ಸುಳ್ಯ: ಗ್ರಾಮ ಪಂಚಾಯತ್ಗಳ ಅಧಿಕಾರ ಅವಧಿ ಮುಗಿದು ಆರು ತಿಂಗಳಾಗುತ್ತಾ ಬಂದಿದೆ. ಗ್ರಾಮ ಪಂಚಾಯತ್ ಚುನಾವಣಾ ಪ್ರಕ್ರಿಯೆಗಳು ಆರಂಭಗೊಂಡಿದ್ದು ಇದೀಗ ಗ್ರಾಮ ಪಂಚಾಯತ್ಗಳ ಸದಸ್ಯರ ಸಂಖ್ಯೆ ಮತ್ತು ಸದಸ್ಯರ ಮೀಸಲಾತಿಯ ಅಧಿಸೂಚನೆ ಪ್ರಕಟಿಸಲಾಗಿದೆ.ಸುಳ್ಯ ತಾಲೂಕಿನ
25 ಗ್ರಾಮ ಪಂಚಾಯತ್ಗಳಲ್ಲಿ ಒಟ್ಟು 282 ಸದಸ್ಯ ಸ್ಥಾನಗಳಿದ್ದು, ಈ 282 ಸ್ಥಾನಗಳ ಸದಸ್ಯರ ಮೀಸಲಾತಿ ಪ್ರಕಟಿಸಲಾಗಿದೆ. 2020ರ ಗ್ರಾಮ ಪಂಚಾಯತ್ ಚುನಾವಣೆಗೆ ವಾರ್ಡ್ ವಿಭಜನೆಯಾಗಿ ನಿಗದಿಯಾದ ವಾರ್ಡ್ಗಳ ಸಂಖ್ಯೆಯೇ ಈ ಬಾರಿಯೂ ಇರಲಿದೆ. 2011ರ ಜನಗಣತಿಯ ಆಧಾರದಲ್ಲಿ ಸದಸ್ಯರ ಸಂಖ್ಯೆಯನ್ನು ನಿಗದಿ ಪಡಿಸಲಾಗಿದೆ. ಆದುದರಿಂದ ಗ್ರಾಮ ಪಂಚಾಯತ್ಗಳ ವಾರ್ಡ್ ಸಂಖ್ಯೆ ಮತ್ತು ಸದಸ್ಯರ ಸಂಖ್ಯೆ ಹಿಂದಿನ ಚುನಾವಣೆಯಂತೆಯೇ ಇರಲಿದೆ.
ಸದಸ್ಯರ ಮೀಸಲಾತಿಯನ್ನು ರೊಟೇಷನ್ ಸಂಪ್ರದಾಯದಂತೆ ಬದಲಿಸಿ ಪ್ರಕಟಿಸಲಾಗಿದೆ. 400 ಜನರಿಗೆ ಒಬ್ಬರು ಎಂಬಂತೆ ಸದಸ್ಯರ ಸಂಖ್ಯೆ ಇರಲಿದೆ. ಉದಾಹರಣೆಗೆ 800 ಜನರಿರುವ ವಾರ್ಡ್ಗೆ 2 ಮಂದಿ ಸದಸ್ಯರು ಇರಲಿದೆ ಎಂದು ತಾಲೂಕು ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.






