ಸುಳ್ಯ:ಸುಳ್ಯ ತಾಲೂಕು ಜನತಾದಳ ಪಕ್ಷದ ಕಾರ್ಯಕರ್ತರ ಸಭೆಯು ಸುಳ್ಯದ ಬ್ರಹ್ಮಶ್ರೀ ಸಭಾಭವನದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಜನತಾದಳ ಸಹಯೋಗದೊಂದಿಗೆ ನಡೆದ ಸಭೆಯ ಅಧ್ಯಕ್ಷತೆಯನ್ನು ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ವಹಿಸಿದ್ದರು. ಪಕ್ಷದ ತಾಲೂಕು ಘಟಕದ
ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಸ್ವಾಗತಿಸಿದರು. ಪಕ್ಷದ ಜಿಲ್ಲಾಧ್ಯಕ್ಷರಾದ ಜಾಕೆ ಮಾಧವ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.ಇತ್ತೀಚೆಗೆ ಅಗಲಿದ ತೂಗುಸೇತುವೆ ಸರದಾರ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಾಜ್ಯಉಪಾಧ್ಯಕ್ಷ ಎಂ.ಬಿ.ಸದಾಶಿವ ಎಸ್.ಐ.ಆರ್. ಕುರಿತು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಹಲವು ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು. ನಿವೃತ್ತ ಶಿಕ್ಷಕ ಚಂದ್ರಶೇಖರ ಗೌಡ, ವೆಂಕಟರಮಣ ಗೌಡ, ಜಯಶ್ರೀ ಕೇರ್ಪಳ, ರಂಜಿತ್, ರೋಹಿತ್,ರೋಹನ್ , ಮಯೂರ್, ಪ್ರಮೋದ್, ದರ್ಶನ್,ಗೌತಮ್ ಅವರನ್ನು ಪಕ್ಷದ ಶಾಲು ಹಾಕುವ ಮೂಲಕ ಜಿಲ್ಲಾಧ್ಯಕ್ಷರು ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಹಿರಿಯರಾದ ಬಾಳಕಜೆ ನಾಗಪ್ಪ ಗೌಡರನ್ನು ಸನ್ಮಾನಿಸಲಾಯಿತು.
ರಾಜ್ಯ ಮೀನುಗಾರಿಕೆ ಘಟಕದ ಅಧ್ಯಕ್ಷ ರತ್ನಾಕರ ಸುವರ್ಣ, ಜಿಲ್ಲಾ ಜನತಾದಳ ಮಾಜಿ ಅಧ್ಯಕ್ಷ ಮಹಮ್ಮದ್ ವಿಟ್ಲ , ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಮೀಜಾ ನಜೀರ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ, ಮುಖಂಡರಾದ ಉಮೇಶ್ ಕುಮಾರ್ ವೈ, ಪ್ರಭಾಕರ ಸಾಲಿಯಾನ್, ಪ್ರಕಾಶ್ ಶೆಟ್ಟಿ, ಮಂಜಪ್ಪ ರೈ ಬೆಳ್ಳಾರೆ, ಕೋಟೆ ಸೋಮ ಸುಂದರ , ಡಾ.ತಿಲಕ್,ಹರಿಪ್ರಸಾದ್ ಯಾನ್ಕಾಜೆ,ಕಾರ್ತಿಕ್ ಕಡಬ, ಡಿ.ಆರ್.ಉದಯಕುಮಾರ್ ಮೊದಲಾದವರು ಭಾಗವಹಿಸಿದರು. ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಕಾರ್ಯಕ್ರಮ ನಿರೂಪಿಸಿದರು. ಸತ್ಯನಾರಾಯಣ ಚಿಮ್ಟಿಕಲ್ಲು ವಂದಿಸಿದರು.ಶಾರದ ಶೆಟ್ಟಿ ಪ್ರಾರ್ಥಿಸಿದರು.






