ಸುಳ್ಯ: ಮಂಗಳೂರಿನಲ್ಲಿ ನಡೆದ ಜಿಲ್ಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿ ಸುಳ್ಯಕ್ಕೆ ಆಗಮಿಸಿದ ಕೆ.ಗೋಕುಲ್ದಾಸ್ ಅವರಿಗೆ ರಥ ಬೀದಿ ಬಳಿ ಅವರ ಮಿತ್ರರು ಮತ್ತು ಕುಟುಂಬದ ಸದಸ್ಯರುಗಳು ಭವ್ಯ ಸ್ವಾಗತ ಕೋರಿದರು. ಪಟಾಕಿ ಸಿಡಿಸಿ, ಹೂ ಗುಚ್ಛ ನೀಡಿ ಶಾಲು ಹೊದಿಸಿ ಬರಮಾಡಿಕೊಂಡರು.
ಈ ಸಂಧರ್ಭದಲ್ಲಿ
ಕಾರ್ಯಕ್ರಮ ಆಯೋಜನೆ ಮಾಡಿದ್ದ ಸುಳ್ಯ ಶ್ರೀ ಶಾರದಾಂಬಾ ಸೇವಾ ಸಮಿತಿಯ ತಂಡದ ಪದಾಧಿಕಾರಿಗಳು, ಸದಸ್ಯರುಗಳು, ಇತರ ಸಂಘ ಸಂಸ್ಥೆಗಳ ಮುಖಂಡರುಗಳು ಅವರಿಗೆ ಹೂ ಗುಚ್ಛ ನೀಡಿ ಹಾರ ಹಾಕಿ ಸ್ವಾಗತಿಸಿ ಇವರ ಸೇವಾ ಮನೋಭಾವ ಮತ್ತು ಇವರು ಸಂಘ ಸಂಸ್ಥೆಗಳಲ್ಲಿ ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಿ ಶುಭಹಾರೈಸಿದರು.
ಸುಳ್ಯ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಪದಾಧಿಕಾರಿಗಳಾದ ತೀರ್ಥರಾಮ ಜಾಲ್ಸೂರು, ಸುನಿಲ್ ಕೇರ್ಪಳ,ಅನಿಲ್ ಪರಿವಾರಕಾನ,ಬೂಡು ರಾಧಾಕೃಷ್ಣ ರೈ, ಮುಖಂಡರುಗಳಾದ ನಂದರಾಜ್ ಸಂಕೇಶ್,ಶಶಿಧರ ಎಂ ಜೆ, ಭವಾನಿಶಂಕರ ಕಲ್ಮಡ್ಕ, ಮಧು ಬೂಡು, ಮೂಸಾ ಕುಂಞಿ ಪೈಂಬಚ್ಚಾಲ್, ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್, ರಾಜು ಪಂಡಿತ್,ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ವೇಳೆ ಪ್ರಶಸ್ತಿ ವಿಜೇತ ಗೋಕುಲ್ ದಾಸ್ ಮಾತನಾಡಿ ಇದು
ನನಗೆ ಸಿಕ್ಕಿದ ಭಾಗ್ಯ ವಾಗಿದೆ. ಇದಕ್ಕೆ ಮೂಲ ಕಾರಣ ಸುಳ್ಯದ ಎಸ್ ಸಿಕ್ಸ್ ತಂಡ, ಅವರು ನನಗೆ ನೀಡಿದ ಗೌರವ ಮತ್ತು ಈ ಭಾರಿ ನನ್ನನ್ನು 50 ವರ್ಷದ ಸಾಧನೆಗೆ ಗುರುತಿಸಿದ ಭಾಗ್ಯದಿಂದ ನನಗೆ ಪ್ರಶಸ್ತಿ ಬಂದಿದೆ. ಅಲ್ಲದೆ ನಮ್ಮ ಶಾಸಕರು ಪಕ್ಷ ಭೇದ ಮರೆತು ನನ್ನ ಹೆಸರನ್ನು ಸೂಚಿಸಿದ್ದಾರೆ.ಬೂಡು ರಾಧಾ ಕೃಷ್ಣ ರೈ ಹಾಗೂ ನಾರಾಯಣ ಕೇಕಡ್ಕ ಕಾರ್ಯಕ್ರಮ ನಿರೂಪಿಸಿದರು.ಮನೆಯವರು ಈ ಸಂಧರ್ಭದಲ್ಲಿ ಸಿಹಿ ತಿಂಡಿ ಮತ್ತು ತಂಪು ಪಾನಿಯ ವಿತರಿಸಿದರು.