ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಪ್ಯಾಕೇಜ್ ರೂಪಿಸಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಎನ್ಎಸ್ಯುಐ ಜಿಲ್ಲಾ ಉಪಾಧ್ಯಕ್ಷ ಕೀರ್ತನ್ ಗೌಡ ಕೊಡಪಾಲ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.ಸುಳ್ಯ ಕ್ಷೇತ್ರದ ಕೃಷಿ, ಶಿಕ್ಷಣ, ಆರೋಗ್ಯ,ಪ್ರವಾಸೋದ್ಯಮ ಮತ್ತು
ಮೂಲಸೌಕರ್ಯ ಅಭಿವೃದ್ಧಿ ಮಾಡಬೇಕು, ರಸ್ತೆ, ಸೇತುವೆ ಅಭಿವೃದ್ಧಿಗೆ ಅನುದಾನ ನೀಡಬೇಕು ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಕ್ರಮ ಕೈಗೊಳ್ಳಬೇಕು,ವನ್ಯ ಜೀವಿಗಳ ದಾಳಿ ತಡೆಯಲು ಸೌರ ಬೇಲಿ ಮತ್ತು ರೈಲು ಬ್ಯಾರಿಕೇಡ್ ಅಳವಡಿಸಬೇಕು,ಅಡಿಕೆ, ರಬ್ಬರ್, ತೆಂಗು, ಕೊಕ್ಕೋ ಹಾಗೂ ಕಾಳುಮೆಣಸು ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಯುವಕರ ವಲಸೆ ತಡೆಯಲು ಸೂಕ್ತ ಉದ್ಯೋಗ ಸೃಷ್ಠಿಸಬೇಕು, ಪಶ್ಚಿಮ ಘಟ್ಟದ ನೈಸರ್ಗಿಕ ಸೌಂದರ್ಯ, ಜಲಪಾತ ಮತ್ತು ಧಾರ್ಮಿಕ ತಾಣಗಳನ್ನು ಒಟ್ಟುಗೂಡಿಸಿ ಇಕೋ-ಟೂರಿಸಂ ಅಭಿವೃದ್ಧಿಪಡಿಸಬೇಕು ಸೇರಿ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಗಿದೆ ಎಂದು ಕೀರ್ತನ್ ಕೊಡಪಾಲ ತಿಳಿಸಿದ್ದಾರೆ.








