ಸುಳ್ಯ:11ನೇ ಆಯುರ್ವೇದ ದಿನಾಚರಣೆ ಕೆವಿಜಿ ಆಯುರ್ವೇದ ಮೆಡಿಕಲ ಕಾಲೇಜಿನಲ್ಲಿ ನಡೆಯಿತು. ಆಯುರ್ವೇದದ ಕಡೆ ನಮ್ಮ ನಡೆ ಎಂಬ ಧ್ಯೇಯದೊಂದಿಗೆ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಂದ ಬೀದಿ ನಾಟಕ ಹಾಗೂ ಜಾಥಾ ನಡೆಯಿತು. ಕಾರ್ಯಕ್ರಮದಲ್ಲಿ
ಸುಳ್ಯ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಶೀನಪ್ಪ, ಎಒಎಲ್ಇಯ ಕೌನ್ಸಿಲ್ ಮೆಂಬರ್ ಜಗದೀಶ್ ಆಡ್ತಲೆ, ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ ವಿ, ನೆಹರೂ ಮೆಮೋರಿಯಲ್ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲ್, ಕಾಲೇಜಿನ ಅಕಾಡೆಮಿ ಕೋ – ಆರ್ಡಿನೇಟರ್ ಡಾ. ಕವಿತಾ ಬಿ ಎಂ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ವಿನಯ್ ಶಂಕರ್ ಭಾರದ್ವಾಜ್ ಬಿ, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನೀಲಿಮಾ ಮತ್ತು ತಂಡದವರು ಪ್ರಾರ್ಥಿಸಿ, ಮಾನ್ಯ ಅಂಬೇಕಲ್ಲು ನಿರೂಪಿಸಿದರು. ಆಯುರ್ವೇದ ದಿನಾಚರಣೆಯ

ಪ್ರಯುಕ್ತ ಆಯುರ್ವೇದ ಸಪ್ತಾಹವನ್ನು ಆಚರಿಸಲಾಯಿತು.ಇದರ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜಾಗೃತಿ ಕಾರ್ಯಗಾರ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ,ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ,ಸ್ವಚ್ಛತಾ ಕಾರ್ಯಕ್ರಮ, ಆಯುರ್ವೇದ ಔಷಧಿ ಸಸ್ಯ ನೆಡುವ ಕಾರ್ಯಕ್ರಮ ನಡೆಯಿತು.







