ಸುಳ್ಯ:ಸೇವಾ ಭಾರತಿ ಹೆಲ್ಫ್ ಲೈನ್ ಟ್ರಸ್ಟ್ ಸುಳ್ಯ ಮತ್ತು ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಇದರ ಆಶ್ರಯದಲ್ಲಿ ಬಾಲಗೋಕುಲ ಪ್ರಶಿಕ್ಷಣ ವರ್ಗ ಅರಂತೋಡು ಗ್ರಾಮದ ‘ಸಿರಿ ಸೌಧ’ ಸಭಾಂಗಣದಲ್ಲಿ ನಡೆಯಿತು.ದಕ್ಷಿಣ ಪ್ರಾಂತ
ಬಾಲಗೋಕುಲ ಸಂಯೋಜಕ್ ಉಮೇಶ್ ಜಿ. ಇವರು ವರ್ಗವನ್ನು ನಡೆಸಿಕೊಟ್ಟರು. ವೇದಾವತಿ ರೈ ಅರಂತೋಡು ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷೆ ಪುಷ್ಪಾ ಮೇದಪ್ಪ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ಜಿ, ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ, ಮತ್ತು ದಮಯಂತಿ ಅಡ್ಕ ಬಲೆ ಇವರು ವರ್ಗ ನಿರ್ವಹಣೆ ಮಾಡಿದರು.ನಿವೃತ್ತ ಶಿಕ್ಷಕರಾದ ತೀರ್ಥರಾಮ ಅಡ್ಕಬಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ
ಬಾಲಗೋಕುಲ ನಡೆಸುವವರು, ಮಾತಾಜಿಗಳು, ಅಂಗನ ವಾಡಿ ಕಾರ್ಯಕರ್ತೆಯರು ಮತ್ತು ಟ್ರಸ್ಟ್ ನ ವಿವಿಧ ಸಮಿತಿಗಳ ಸದಸ್ಯರು ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಬಾಲಗೋಕುಲ ಪುತ್ತೂರು ಜಿಲ್ಲಾ ಸಂಯೋಜಕ್ ಭುಕ್ಷಿತ್ ಐನೆಕಿದು ಕಾರ್ಯಕ್ರಮ ನಿರೂಪಿಸಿದರು.






