ಸುಳ್ಯ: ಸುಳ್ಯದ ಪ್ರಥಮ ಉದ್ಯಮ, ಕ್ಯಾಶ್ಯೂ ಉದ್ಯಮ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿ ಹೆಸರು ಮಾಡಿರುವ ಜಾಲ್ಸೂರು ವಿನೋಬನಗರದ ಕೆ. ಸುಬ್ರಾಯ ಅನಂತ ಕಾಮತ್ ಆ್ಯಂಡ್ ಸನ್ಸ್ ಸಂಸ್ಥೆಯು 52 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಅಗಲಿದ ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ಅವರು 1972ರಲ್ಲಿ ಸ್ಥಾಪಿಸಿದ ಕಂಪೆನಿ ಇಂದು ಕ್ಯಾಶ್ಯೂ ವ್ಯವಹಾರ ಮತ್ತು
ರಫ್ತು ಉದ್ಯಮ ಕ್ಷೇತ್ರದ ಅಗ್ರ ಗಣ್ಯ ಸಂಸ್ಥೆಯಾಗಿ ಬೆಳೆದಿದೆ. ಶ್ರೀ ಗಣೇಶ್ ಕ್ಯಾಶ್ಯೂಸ್ ಎಂಬ ತಮ್ಮ ಔಟ್ಲೆಟ್ಗಳ ಮೂಲಕ ತಮ್ಮದೇ ಫ್ಯಾಕ್ಟರಿಯಲ್ಲಿ ತಯಾರಿಸುವ ಗುಣಮಟ್ಟದ ಗೋಡಂಬಿಗಳನ್ನು ನೀಡುವ ಮೂಲಕ ಗ್ರಾಹಕರ ಅಚ್ಚುಮೆಚ್ಚಿನ ಸಂಸ್ಥೆಯಾಗಿ
ಕೆ. ಸುಬ್ರಾಯ ಅನಂತ ಕಾಮತ್ ಆ್ಯಂಡ್ ಸನ್ಸ್ ಕಂಪೆನಿ ಹೆಸರು ಮಾಡಿದೆ. ದೇಶದ ಗೋಡಂಬಿ ರಫ್ತು ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದೆ.
ಉಪೇಂದ್ರ ಕಾಮತ್ ಅವರ ಪುತ್ರ ಉದ್ಯಮಿ ಸುಧಾಕರ ಕಾಮತ್ ಅವರು ಮುನ್ನಡೆಸುತ್ತಿರುವ ಕೆ. ಸುಬ್ರಾಯ ಅನಂತ ಕಾಮತ್ ಆ್ಯಂಡ್ ಸನ್ಸ್ ಸಂಸ್ಥೆಯು 52 ನೇ ವರ್ಷಕ್ಕೆ
ಪಾದಾರ್ಪಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಮತ್ತು ಶ್ರೀ ಗಣೇಶ ಹಬ್ಬದ ಸಂಭ್ರಮದ ಪ್ರಯುಕ್ತ ವಿಶೇಷ ಕೊಡುಗೆಯನ್ನು ಘೋಷಿಸಿದೆ.
ಸಂಸ್ಥೆಯ ಫ್ಯಾಕ್ಟರಿ ಔಟ್ಲೆಟ್ ಸುಳ್ಯ ಮುಖ್ಯ ರಸ್ತೆಯ ಶ್ರೇಯಸ್ ಕಾಂಪ್ಲೆಕ್ಸ್ನ ಶ್ರೀ ಗಣೇಶ್ ಕ್ಯಾಶ್ಯೂಸ್ನಲ್ಲಿ,ಪ್ರತಿ ರೂ.1000 ದ ಖರೀದಿಗೆ 100 ಗ್ರಾಂ ಗೋಡಂಬಿ ಉಚಿತವಾಗಿ ನೀಡಲಾಗುತ್ತದೆ.
ಈ ವಿಶೇಷ ಕೊಡುಗೆ ಆಗಸ್ಟ್ 30 ರಿಂದ ಸೆಪ್ಟೆಂಬರ್ 7 ರ ತನಕ ಇರಲಿದೆ.
ಈ ಕೊಡುಗೆಯನ್ನು ಪಡೆಯಲು, ಅತ್ಯುತ್ತಮ ಗುಣಮಟ್ಟದ ಗೋಡಂಬಿ ಖರೀದಿಸಲು ಸಂಪರ್ಕಿಸಿ:
ಫ್ಯಾಕ್ಟರಿ ಔಟೈಟ್ : ಶ್ರೀ ಗಣೇಶ್ ಕ್ಯಾಶ್ಯೂಸ್, ಶ್ರೇಯಸ್ ಕಾಂಪ್ಲೆಕ್ಸ್, ಮುಖ್ಯ ರಸ್ತೆ, ಸುಳ್ಯ – 574239
ದೂರವಾಣಿ:7975920725