ನವದೆಹಲಿ:ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಅಫ್ಗಾನಿಸ್ತಾನ ತಂಡದ ವಿರುದ್ಧದ ಮೊದಲ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.ಅರುಣ್ ಜೇಟ್ಲಿ ಕ್ರೀಡಾಂಗಣ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನ 20 ಓವರ್ಗಳಲ್ಲಿ
8 ವಿಕೆಟ್ಗೆ 156 ರನ್ ಗಳಿಸಿತು.ಗುರಿ ಬೆನ್ನಟ್ಟಿದ ಭಾರತ 13.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಅಭಿಷೇಕ್ ಶರ್ಮ ಕೇವಲ 32 ಎಸೆತಗಳಲ್ಲಿ ತಲಾ 7 ಸಿಕ್ಸರ್ ಹಾಗು ಬೌಂಡರಿ ನೆರವಿನಿಂದ 82 ರನ್ ಗಳಿಸಿದರು. ಇಷಾನ್ ಕಿಶನ್ 33 ಎಸೆತಗಳಲ್ಲಿ 5 ಬೌಂಡರಿ ಹಾಗು 1 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದರು. ಸಂಜು ಸ್ಯಾಮ್ಸನ್(10), ನಾಯಕ ಶ್ರೇಯಸ್ ಅಯ್ಯರ್ (ಅಜೇಯ 8), ತಿಲಕ್ ವರ್ಮ (ಅಜೇಯ3) ರನ್ ಬಾರಿಸಿದರು. ಇದಕ್ಕೂ
ಮುನ್ನ ಬೂಮ್ರಾ (26ಕ್ಕೆ1) ಮತ್ತು ಅರ್ಷದೀಪ್ (19ಕ್ಕೆ3) ದಾಳಿಗೆ ಸಿಲುಕಿದ ಅಫ್ಗಾನ್ ತಂಡ ತಂಡವು 43 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಅಜ್ಮತ್ವುಲ್ಲಾ ಒಮರ್ಝೈ (ಅಜೇಯ 64; 44ಎ, 4X4, 6X4) ಮತ್ತು ಮೊಹಮ್ಮದ್ ನಬಿ (33; 27ಎ, 4X2, 6X2) ಹೋರಾಟ ನಡೆಸಿ ಗೌರವಯುತ ಮೊತ್ತ ಗಳಿಸಲು ನೆರವಾದರು.
ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಅವರೂ ತಲಾ ಒಂದು ವಿಕೆಟ್ ಗಳಿಸಿದರು.











