ಸುಳ್ಯ:ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆಯುವ ಫಿನಾನ್ಸ್ ಗ್ಲೋಬಲ್ ಮೀಟ್ನಲ್ಲಿ ಭಾಗವಹಿಸಲು ಭಾರತದ ನಾನಾ ಪ್ರದೇಶಗಳ ಫೋಸಿಲ್ ಕಂಪೆನಿಯ ಪ್ರತಿನಿಧಿಯಾಗಿ ಸುಳ್ಯದ ಕೆ. ಬಿ ಹಬೀಬ್ ರೆಹ್ಮಾನ್ ಅವರು
ಅಮೇರಿಕಾಕ್ಕೆ ತೆರಳಿದ್ದಾರೆ. ಚಾರ್ಟೆಡ್ ಎಕೌಂಟೆಂಟ್ ಆಗಿರುವ ಕೆ.ಬಿ.ಹಬೀಬ್ ರೆಹ್ಮಾನ್ ಬೆಂಗಳೂರಿನಲ್ಲಿ ಫೋಸಿಲ್ ಕಂಪೆನಿಯ ಜನರಲ್ ಮ್ಯಾನೇಜರ್ ಆಗಿದ್ದಾರೆ.
ಹಬೀಬ್ ರೆಹ್ಮಾನ್ ಸುಳ್ಯ ಗಾಂಧಿನಗರ ನಾವೂರು ನಿವಾಸಿ ಹಿರಿಯ ಉದ್ಯಮಿ ಹಾಜಿ ಕೆ. ಬಿ. ಮಹಮ್ಮದ್ ಮತ್ತು ಖದೀಜ ಹಜ್ಜುಮ್ಮ ದಂಪತಿಗಳ ಪುತ್ರ.


















