ಪಂಜ:ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಪಂಜ ಮತ್ತು ನಿಂತಿಕಲ್ಲು ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ ತಾಲೂಕು,ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪಂಜ ವಲಯ ಇದರ ಆಶ್ರಯದಲ್ಲಿ 17ನೇ ವರ್ಷದ ಭಜನಾ ತರಬೇತಿ ಶಿಬಿರ ಮತ್ತು
ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಯಿತು. ಸೂರ್ಯೋದಯದಿಂದ ಸೂರ್ಯಾಸ್ತಮಾನವರೆಗೆ ನಡೆಯುವ ಅರ್ಧ ಏಕಾಹ ಭಜನಾ ಕಾರ್ಯಕ್ರಮವನ್ನು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಕಾರ್ಯದರ್ಶಿ ಗುರುಪ್ರಸಾದ್ ತೋಟ, ಭಜನಾ ಶಿಬಿರದ ಸಂಚಾಲಕ ಲೋಕೇಶ್ ಬರೆಮೇಲು,ರಾಜ ಕುಮಾರ್ ಬೇರ್ಯ, ಶ್ಯಾಮ ಕೃಷ್ಣ ನಗರ, ಶಿವಪ್ಪ ಸಂಕಡ್ಕ, ಮಹಾಲಿಂಗ ಸಂಪ, ಪುರಂದರ ನಾಗತೀರ್ಥ, ಮಧು ಚಂದ್ರ ಆಚಾರ್ಯ ಕುದ್ವ, ಪುಷ್ಪ ಡಿ ಪ್ರಸಾದ್ ಕಾನತ್ತೂರ್, ಸರಿತಾ, ಭಜನೆ ತಂಡದವರು ಉಪಸ್ಥಿತರಿದ್ದರು.
ಪೂರ್ವಾಹ್ನ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು.


















