ಸುಳ್ಯ:ಕಾಂತಾರ ಖ್ಯಾತಿಯ ಚಲನಚಿತ್ರ ನಟ ಕಿಶೋರ್ ಕುಮಾರ್ ಅವರು ಇಂದು ಸುಳ್ಯಕ್ಕೆ ಭೇಟಿ ನೀಡಿದ್ದರು. ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಅವರು ಸುಳ್ಯ ಅರಂಬೂರಿನ ‘ಶ್ರೀಕೃಷ್ಣ ರಸಪಾಕಂ ಗ್ರ್ಯಾಂಡ್’ ಹೋಟೆಲ್ಗೆ ಭೇಟಿ ನೀಡಿದರು. ಹೋಟೆಲ್ನ ಮಾಲಕರಾದ ನಾರಾಯಣ ಕೇಕಡ್ಕ, ಸುಪ್ರೀತಾ ಕೇಕಡ್ಕ ಸ್ವಾಗತಿಸಿದರು. ಉಪಾಹಾರ ಸೇವಿಸಿ ನೂತನ ಹೋಟೆಲ್ಗೆ ಶುಭ ಹಾರೈಸಿ ಅವರು ತೆರಳಿದರು. ಪತ್ರಕರ್ತರಾದ ದುರ್ಗಾಕುಮಾರ್ ನಾಯರ್ಕೆರೆ, ಯಶ್ವಿತ್ ಕಾಳಂಮನೆ, ಶಿವಪ್ರಸಾದ್ ಕೇರ್ಪಳ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.ಕಾಂತಾರ ಚಲನಚಿತ್ರದಲ್ಲಿ ಅರಣ್ಯಾಧಿಕಾರಿ ಪಾತ್ರದಲ್ಲಿ ಅವರು ಮಿಂಚಿದ್ದರು
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.















