ಲಖನೌ: ಅಫ್ಗಾನಿಸ್ತಾನ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು 170 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನು ಒಂದು ಪಂದ್ಯ ಇರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.ನಾಯಕ
ಶುಭಮನ್ ಗಿಲ್ (154) ಹಾಗೂ ವಿಕೆಟ್ ಕೀಪರ್ ಎಡಗೈ ಬ್ಯಾಟರ್ ಇಶಾನ್ ಕಿಶನ್ (125) ಅಮೋಘ ಶತಕಗಳ ನೆರವಿನಿಂದ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 49.5 ಓವರ್ಗಳಲ್ಲಿ 402 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.ಈ ಗುರಿ ಬೆನ್ನಟ್ಟಿದ ಅಫ್ಗನ್ 44.3 ಓವರ್ಗಳಲ್ಲಿ 232 ರನ್ಗಳಿಸಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಅಫ್ಗನ್ ಪರ ರಹಮತ್ ಶಾ 79 ಹಾಗೂ ಸೆದಿಖುಲ್ಲಾ ಅತಲ್ 42 ರನ್ ಗಳಿಸಿದರು.
ಭಾರತದ ಪರ ಗುರ್ನೂರ್ ಬ್ರಾರ್ ಹಾಗೂ ಅರ್ಷದೀಪ್ ಸಿಂಗ್ ತಲಾ ಮೂರು ವಿಕೆಟ್ ಗಳಿಸಿದರು. ಪ್ರಿನ್ಸ್ ಯಾದವ್ ಚೊಚ್ಚಲ ಪಂದ್ಯದಲ್ಲಿ ಎರಡು ವಿಕೆಟ್ ಗಳಿಸಿದರು.ಸರಣಿಯ ಅಂತಿಮ ಪಂದ್ಯವು ಜೂನ್ 20 ಶನಿವಾರದಂದು ಚೆನ್ನೈಯಲ್ಲಿ ನಡೆಯಲಿದೆ.








