ಕಾರ್ಡಿಫ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್ಗಳ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿ 1-1 ರಿಂದ ಸಮಬಲಗೊಂಡಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 44 ಓವರ್ಗಳಲ್ಲಿ 233 ರನ್ಗಳಿಗೆ ಆಲೌಟ್ ಆಯಿತು.234 ರನ್ಗಳ ಗುರಿ ಬೆನ್ನಟ್ಟಿದ
ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು 44.1 ಓವರ್ಗಳಲ್ಲಿ ಗೆಲುವಿನ ದಡ ಸೇರಿತು.133 ಎಸೆತಗಳಲ್ಲಿ 99 ರನ್ ಗಳಿಸಿ ಅಜೇಯರಾಗುಳಿದ ಜೋ ರೂಟ್ ಗೆಲುವಿನ ರುವಾರಿಯಾದರು. ಆರಂಭದಲ್ಲೇ ಬೆನ್ ಡಕೆಟ್ (0) ಹಾಗೂ ಬೆಥೆಲ್ (4) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಅನುಭವಿ ಬ್ಯಾಟರ್ ಜೋ ರೂಟ್ ಅತ್ಯುತ್ತಮ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಇವರಿಗೆ ವಿಲ್ ಜ್ಯಾಕ್ಸ್ (30) ಹಾಗೂ ಸ್ಯಾಮ್ ಕರನ್ (26) ಉತ್ತಮ ಸಾಥ್ ನೀಡಿದರು. ಭಾರತದ ಪರ ಗುರ್ನೂರ್ ಬ್ರಾರ್ 2 ವಿಕೆಟ್ ಪಡೆದರು. ಈ ಮೊದಲು ಭಾರತದ ಪರ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಅರ್ಧ ಶತಕ ಬಾರಿಸಿದರು.
ವಿರಾಟ್ ಕೊಹ್ಲಿ (65), ಶ್ರೇಯಸ್ ಅಯ್ಯರ್ (66),
ನಾಯಕ ಶುಭಮನ್ ಗಿಲ್ (31) ರೋಹಿತ್ ಶರ್ಮಾ (26) ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ (2), ಅಕ್ಷರ್ ಪಟೇಲ್ (1), ಶಿವಂ ದುಬೆ (0) ಮತ್ತು ಪ್ರಸಿದ್ಧ್ ಕೃಷ್ಣ (0) ನಿರಾಸೆ ಮೂಡಿಸಿದರು. ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಅಜೇಯ 20 ರನ್ ಗಳಿಸಿ ತಂಡದ ಮೊತ್ತವನ್ನು 233ಕ್ಕೆ ತಲುಪಿಸಿದರು.








