ಏಣಾವರ:ಏಣಾವರ ಅಹ್ಮದುಲ್ ಬದವೀ ಮಸ್ಜಿದ್ ನಲ್ಲಿ ಈದ್ ಸಂಭ್ರಮದಿಂದ ಆಚರಿಸಲಾಯಿತು. ಏಣಾವರ ಮಸ್ಜಿದ್ ಇಮಾಂ ಎ.ಎಂ.ಫೈಝಲ್ ಝುಹ್ರಿ ಅವರ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತುಬ ನಡೆಯಿತು. ಈದ್ ಸಂದೇಶವನ್ನು ಸಾರಿದ ಅವರು ಈದ್ ಹಬ್ಬವು ಬಹಳಷ್ಟು ಸ್ಮರಣೆಗಳ ಮೂಲಕ ಮನುಷ್ಯನಿಗೆ ಕ್ಷಮೆಯ ಮೂಲಕ ಶಾಂತಿಯನ್ನು ಸ್ಥಾಪಿಸಿ, ತ್ಯಾಗದ ಮೂಲಕ ಸೌಹಾರ್ದತೆಯನ್ನು ಕಾಪಾಡುವ ಸಂದೇಶವನ್ನು ನೀಡುತ್ತದೆ ಎಂದರು.