ಕಲ್ಪಟ್ಟ: ಕೇರಳದ ವಯನಾಡಿನಲ್ಲಿ ಕಾಡಾನೆ ಆಕ್ರಮಣಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.ವಯನಾಡು ನೂಲ್ಪುಯ ಎಂಬಲ್ಲಿ ನಿನ್ನೆ ರಾತ್ರಿ ಕಾಡಾನೆಯ ಆಕ್ರಮಣ ನಡೆಯಿತು. ಇದು ತಮಿಳುನಾಡಿನ ಗಡಿ ಪ್ರದೇಶವಾಗಿದೆ.ನೂಲ್ಪುಯ ಕಾಪಾಡ್ ಪ್ರದೇಶ ತಮಿಳುನಾಡಿನ ಗಡಿ ಪ್ರದೇಶ. ಇಲ್ಲಿ
ವಾಸ್ತವ್ಯ ಇದ್ದ ಮನು(45) ಮೃತಪಟ್ಟವರು ಪೇಟೆಗೆಂದು ಬರುವಾಗ ಕಾಡಾನೆ ಧಾಳಿ ನಡೆದು, ಇಂದು ಬೆಳಿಗ್ಗೆ ಮನುವಿನ ಮೃತದೇಹ ಪತ್ತೆಯಾಗಿದೆ. ಜತೆಗಿದ್ದ ಪತ್ನಿ ಚಂದ್ರಿಕ ನಾಪತ್ತೆಯಾಗಿದ್ದು, ಬಳಿಕ ಹುಡುಕಾಟ ನಡೆಸಿ ಪತ್ತೆ ಮಾಡಲಾಯಿತು. ಇವರು ತಮಿಳುನಾಡಿನ ವೆಳ್ಳೇರಿ ನಿವಾಸಿಗಳಾಗಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ನಾಗರಿಕರು ಪ್ರತಿಭಟಿಸಿದ್ದಾರೆ.