ಸುಳ್ಯ:ನಾಡಿಗೆ ಇಳಿದ ಕಾಡಾನೆ ದಾಳಿ ನಡೆಸಿ ಯುವಕ ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಕಲ್ಮಕ್ಕಾರು ಶಕ್ತಿ ನಗರ ಎಂಬಲ್ಲಿಂದ ವರದಿಯಾಗಿದೆ. ಆನೆ ದಾಳಿಗೊಳಗಾಗಿ ಕೊಪ್ಪಡ್ಕದ ಚರಿತ್ (28) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಇವರಿಗೆ
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗಿನಿಂದ ಕಲ್ಮಕ್ಕಾರು ಭಾಗದಲ್ಲಿ ಮತ್ತು ರಸ್ತೆಯಲ್ಲಿ ಕಾಡಾನೆಯೊಂದು ಸುತ್ತಾಡುತ್ತಿದ್ದದು ಕಂಡು ಬಂದಿತ್ತು.ಈ ಮಧ್ಯೆ ಚರಿತ್ ಮೇಲೆ ಆನೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ ಎಂದು ವರದಿಯಾಗಿದೆ. ಶಬರಿಮಲೆ ಅಯ್ಯಪ್ಪ ವೃತಧಾರಿಯಾಗಿದ್ದ ಚರಿತ್ ಹೊಳೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಸಂದರ್ಭ ಆನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.