ಸುಳ್ಯ: ಸುಳ್ಯ ನಗರ ಸಮೀಪದ ಅರಂಬೂರಿನಲ್ಲಿ ಕಾಡಾನೆಗಳ ಹಿಂಡು ಶುಕ್ರವಾರ ರಾತ್ರಿ ಮತ್ತೆ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಗ್ಗಿನ ಜಾವ 6-7 ಆನೆಗಳ ಹಿಂಡು ರಸ್ತೆ ದಾಟಿ ಪೂಮಲೆ ಕಾಡಿನತ್ತ ಸಾಗಿತ್ತು. ಈ ದೃಶ್ಯ
ವಾಹನ ಸವಾರರು ಸೆರೆ ಹಿಡಿದಿದ್ದು ವೈರಲ್ ಆಗಿತ್ತು.ರಾತ್ರಿ ಮತ್ತೆ ಮರಳಿ ಬಂದ ಗಜಪಡೆ ಅರಂಬೂರು ಸಮೀಪದ ಅರಣ್ಯ ಇಲಾಖೆಯ

ಡಿಪ್ಪೊದ(ನಾಟಾ ಸಂಗ್ರಹಾಲಯ) ಕಂಪೌಂಡ್ ಪುಡಿಗೆಟ್ಟಿದೆ. ಕಂಪಂಡ್ ಪುಡಿ ಮಾಡಿ ಒಳಗೆ ನುಗ್ಗಿದ ಆನೆಗಳು
ಡಿಪ್ಪೊದ ಒಳಗೆ ಸುತ್ತಾಟ ನಡೆಸಿದೆ. ಮರಿಗಳು ಸೇರಿ 6-7 ಆನೆಗಳ ಹಿಂಡು ಅರಂಬೂರು, ಪರಿವಾರಕಾನ ಸೇರಿದಂತೆ ಆಲೆಟ್ಟಿ ಗ್ರಾಮದ ವಿವಿಧ ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ಕೃಷಿ ಹಾನಿ ಮಾಡುತ್ತಿವೆ. ನಿನ್ನೆ

ರಾತ್ರಿ ಬಂದ ಆನೆಗಳು ಆನೆಗಳು ಪೂಮಲೆ ಕಾಡಿನತ್ತ ತೆರಳಿವೆ. ಆನೆಗಳ ಹಿಂಡು ಕಾಡಿನ ಭಾಗಕ್ಕೆ ತೆರಳಿದೆ. ಸಣ್ಣ ಮರಿಗಳು ಇರುವ ಕಾರಣ ಆನೆ ಹಿಂಡು ದೂರ ಸರಿಯುತ್ತಿಲ್ಲ ಎಂದು ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಹೇಳಿದ್ದಾರೆ. ಶುಕ್ರವಾರ ರಾತ್ರಿ ವಿಪರೀತ ಮಳೆ ಸುರಿಯುತ್ತಿದ್ದಂತೆ ಕಾಡಾನೆಗಳ ಹಿಂಡು ಅರಂಬೂರು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮತ್ತು ಜನ ವಸತಿ ಪ್ರದೇಶದ ಸಮೀಪದಲ್ಲಿ ಬೀಡು ಬಿಟ್ಟ ಕಾರಣ ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಯಾಗಿತ್ತು. ತಡರಾತ್ರಿ ತನಕ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿತ್ತು.

