ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗ ವ್ಯಾಪ್ತಿಯ ಕಡಬ ತಾಲೂಕಿನ ಬೆಳಂದೂರು ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 48 ಸೆಂಟಿ ಮೀಟರ್(480 ಮಿ.ಮಿ.) ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ಪ್ರಕೋಪ ನಿರ್ವಹಣಾ ಕೇಂದ್ರ(ಕೆಎಸ್ಎನ್ಡಿಎಂಸಿ) ಮಾಹಿತಿ ನೀಡಿದೆ.
ಬೆಳ್ತಂಗಡಿ ತಾಲೂಕಿನ
ಬಾರ್ಯದಲ್ಲಿ 37 ಸೆ.ಮಿ, ಸುಳ್ಯ ತಾಲ್ಲೂಕು ಬೆಳ್ಳಾರೆಯಲ್ಲಿ 28 ಸೆ.ಮಿ., ಪುತ್ತೂರಿನ ರಾಮಕುಂಜ 27 ಸೆ.ಮಿ, ಬಂಟ್ವಾಳದ ಕಾವಳಮುಡೂರು 24 ಸೆ.ಮಿ., ಬೆಳ್ತಂಗಡಿಯ ಪಟ್ರಮೆಯಲ್ಲಿ 24 ಸೆಂಟಿ ಮೀಟರ್ ಮಳೆ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿನ್ನೆ ಹಗಲು ಮತ್ತು ರಾತ್ರಿ ಭಾರೀ ಮಳೆಯಾಗಿತ್ತು.

