ಸುಳ್ಯ:ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರನ್ನು ಸುಳ್ಯದ ಗೌಡರ ಯುವ ಸೇವಾ ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ ಅವರ ನೇತೃತ್ವದಲ್ಲಿ ಸಂಘದ ಪ್ರಮುಖರು
ಗೌರವಿಸಿ ಸನ್ಮಾನಿಸಲಾಯಿತು. ಪೂರ್ವಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ,ಹಿರಿಯ ನಿರ್ದೇಶಕರಾದಸೂರಯ್ಯ ಸೂಂತೋಡು, ನಿರ್ದೇಶಕರಾದ ಸುರೇಶ್ ಎಂ.ಹೆಚ್., ಸುಪ್ರೀತ್ ಮೋಂಟಡ್ಕ, ತರುಣ ಘಟಕದ ಅಧ್ಯಕ್ಷ ಪ್ರೀತಮ್ ಡಿ.ಕೆ.,ಸುಳ್ಯ ಎ.ಒ.ಎಲ್.ಇ. ಬಿ ಕಮಿಟಿ ಸಿ.ಇ.ಒ. ಡಾ.ಉಜ್ವಲ್ ಯು.ಜೆ., ಪ್ರಸನ್ನ ಕಲ್ಲಾಜೆ, ಗಿರೀಶ್ ನಾರ್ಕೋಡು, ಡಾ.ರೇವಂತ್ ಮೊದಲಾದವರರು ಉಪಸ್ಥಿತರಿದ್ದರು.