ಜೆದ್ದಾ:ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೆಗಾ ಹರಾಜಿನಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ 27 ಕೋಟಿಗೆ ಲಖನೌಗೆ ಮತ್ತು ಶ್ರೇಯಸ್ ಅಯ್ಯರ್ 26.75 ಕೋಟಿಗೆ
ಅವರನ್ನು ಪಂಜಾಬ್ ಕಿಂಗ್ಸ್ ತಂಡವು ಖರೀದಿಸಿತು. ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರನೆಂಬ ಹೆಗ್ಗಳಿಕೆಗೆ ರಿಷಭ್ ಪಾತ್ರರಾದರು. ಇದೇ ಸಾಲಿನಲ್ಲಿ ಎರಡನೇ ಸ್ಥಾನವನ್ನು
ಶ್ರೇಯಸ್ (26.75 ಕೋಟಿ) ಪಡೆದುಕೊಂಡರು. ಹೋದ ವರ್ಷ 24.75 ಕೋಟಿ ಗಳಿಸಿದ್ದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ದಾಖಲೆಯನ್ನು ಈ ಇಬ್ಬರೂ ಭಾರತೀಯ ಆಟಗಾರರು ಮುರಿದರು. ಈ ಬಾರಿ ಸ್ಟಾರ್ಕ್ ಅವರು 11.75 ಕೋಟಿ ಗಳಿಸಿ ಡೆಲ್ಲಿ ತಂಡ ಸೇರಿಕೊಂಡರು.
ಕಳೆದ ಐಪಿಎಲ್ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡವು ಶ್ರೇಯಸ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಅದರಿಂದಾಗಿ ಅವರ ಖರೀದಿಗೆ ಅಪಾರ ಪೈಪೋಟಿ ಏರ್ಪಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಭ್ ಅವರು ಕೂಡ ತಂಡದಿಂದ ಬಿಡುಗಡೆ ಗೊಂಡಿದ್ದರು. ಬಿಡ್ನಲ್ಲಿ ಅವರು 25 ಕೋಟಿ ಪಡೆಯುತ್ತಾರೆಂದು ನಿರೀಕ್ಷೆ ಇತ್ತು. ವೆಂಕಟೇಶ್ ಅಯ್ಯರ್ ಅವರು 23.75 ಕೊಟಿ ಕೆಕೆಆರ್ ತಂಡವೇ ಅವರನ್ನು ಖರೀದಿಸಿತು. ಕೆ.ಎಲ್. ರಾಹುಲ್ ಅವರು ಕಳೆದ ಋತುಗಳಲ್ಲಿ ಲಖನೌ ತಂಡದ ನಾಯಕರಾಗಿದ್ದರು. ಈ ಬಾರಿ ಅವರು ಡೆಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಹುಲ್ ಅವರನ್ನು 14 ಕಖರೀದಿಸಿದೆ
ಡಿದ ಡೆಲ್ಲಿ ತನ್ನ ತೆಕ್ಕೆಗೆಳೆದುಕೊಂಡಿತು.
ಅನುಭವಿ ಆಫ್ಸ್ಪಿನ್ನರ್ ಆರ್. ಅಶ್ವಿನ್ ಅವರು ತಮ್ಮ ತವರು ತಮಿಳುನಾಡಿನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಿದ್ದಾರೆ. ಅಶ್ವಿನ್ ಅವರಿಗೆ 9.75 ಕೋಟಿ ಲಭಿಸಿತು.
ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಅವರನ್ನು ಚೆನ್ನೈ ತಂಡವು ಮರಳಿ ಖರೀದಿಸಿತು. ಕ್ರಮವಾಗಿ 6.55 ಕೋಟಿ ಮತ್ತು 4 ಕೋಟಿ ನೀಡುವ ಮೂಲಕ ಉತ್ತಮ ಲಾಭ ಪಡೆದುಕೊಂಡಿತು.
ಆಸ್ಟ್ರೇಲಿಯಾದ ಬಿರುಸಿನ ಬ್ಯಾಟರ್ ಜೇಕ್ ಫ್ರೆಸರ್ ಮಕ್ಗುರ್ಕ್ ಡೆಲ್ಲಿ ತಂಡಕ್ಕೆ ಮರಳಿದರು. ಅವರಿಗೆ 9 ಕೋಟಿ ಲಭಿಸಿತು. ವಿರಾಟ್ ಕೊಹ್ಲಿ ರಜತ್ ಪಾಟೀದಾರ್ ಮತ್ತು ಯಶ್ ದಯಾಳ್ ಅವರನ್ನು ಬಿಟ್ಟು ಉಳಿದೆಲ್ಲ ಆಟಗಾರರನ್ನು ಬಿಡುಗಡೆ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ ಮತ್ತು ಫಿಲ್ ಸಾಲ್ಟ್ ಅವರನ್ನು ಖರೀದಿಸಿತು. ಆಸ್ಟ್ರೇಲಿಯಾದ ಜೋಷ್ ಹ್ಯಾಜಲ್ವುಡ್ ಅವರನ್ನು ಖರೀದಿಸಿದೆ.