ಸುಳ್ಯ:ಏನೆಕಲ್ಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ – ಬಾಲಕಿಯರ ಜಿಲ್ಲಾ ಮಟ್ಟದ ತ್ರೋ ಬಾಲ್ ಪಂದ್ಯಾಟವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ದ.ಕ. ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ
ಇಲಾಖೆ ಮಂಗಳೂರು, ದ.ಕ. ಜಿಲ್ಲೆ ಶಿಕ್ಷಣಾಧಿಕಾರಿಯವರ ಕಛೇರಿ ಮತ್ತು ಕ್ಷೇತ್ರ ಸಮನ್ವಯಧಿಕಾರಿಯವರ ಕಛೇರಿ, ಸುಳ್ಯ ದ.ಕ. ಹಾಗೂ ಸರಕಾರಿ ಪ್ರೌಢಶಾಲೆ ಏನೆಕಲ್ಲು ಇವರ ಸಂಯುಕ್ತ ಆಶ್ರಯದಲ್ಲಿ ತ್ರೋ ಬಾಲ್ ಪಂದ್ಯಾಟ ನಡೆಯುತಿದೆ. ದೀಪ ಬೆಳಗಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದ
ಅವರು ಆಗಮಿಸಿದ ಎಲ್ಲಾ ಏಳು ತಾಲೂಕಿನ ಶಾಲೆಯ ತಂಡಕ್ಕೆ ಶುಭಹಾರೈಸಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೀತಲ್, ತಾಲೂಕು ಕ್ರೀಡಾಧಿಕಾರಿ ಸೂಫಿ ಪೆರಾಜೆ ಮತ್ತಿತರರು ಉಪಸ್ಥಿತರಿದ್ದರು.
















