ಸುಳ್ಯ:ಕನ್ನಡ ರಾಜ್ಯೋತ್ಸವ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ (ಜಿಲ್ಲಾ ಮಟ್ಟದ ಸನ್ಮಾನ) ಪ್ರಕಟವಾಗಿದೆ. ವೈಯುಕ್ತಿಕ ಹಾಗೂ ಸಂಘ ಸಂಸ್ಥೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 94 ಪ್ರಶಸ್ತಿಗಳು ಪ್ರಕಟವಾಗಿದೆ. ಆದರೆ ಸುಳ್ಯ ತಾಲೂಕಿಗೆ
ಯಾವುದೇ ಪ್ರಶಸ್ತಿಗಳು ಬಂದಿಲ್ಲ.ಕಳೆದ ವರ್ಷವೂ ಕೂಡಾ ಸುಳ್ಯಕ್ಕೆ ಪ್ರಶಸ್ತಿ ನೀಡದೇ ಕಡೆಗಣಿಸಲಾಗಿತ್ತು. ಬಳಿಕ ಒತ್ತಡ ವ್ಯಕ್ತವಾದ ಹಿನ್ನಲೆಯಲ್ಲಿ ಕೆ.ಗೋಕುಲದಾಸ್ ಅವರಿಗೆ ಪ್ರಶಸ್ತಿ ನೀಡಲಾಗಿತ್ತು.
ಕೆಲವರ ಹೆಸರನ್ನು ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಲಾಗಿದ್ದರೂ ಅದು ಯಾವುದನ್ನೂ ಪರಿಗಣಿಸಲಾಗಿಲ್ಲ. ಆದುದರಿಂದಲೇ ಪಟ್ಟಿಯಲ್ಲಿ ಸುಳ್ಯದವರು ಯಾರೂ ಸೇರಿಲ್ಲ.















