ಸುಳ್ಯ:ಕರ್ನಾಟಕ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸೊಯೇಷನ್ ಮತ್ತು ಸುಳ್ಯದ ಹರೀಶ್ ಫಿಟ್ನೆಸ್ ನೇತೃತ್ವದಲ್ಲಿ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಏ.25ರಂದು ಸುಳ್ಯದ ಬಂಟರ ಭವನದಲ್ಲಿ ಉದ್ಘಾಟನೆಗೊಂಡಿತು.ಕಾರ್ಯಕ್ರಮ ಉದ್ಘಾಟಿಸಿದ ಸುಳ್ಯ ಪೊಲೀಸ್ ಉಪನಿರೀಕ್ಷಕ ಸಂತೋಷ್ ಕುಮಾರ್ ಬಿ.ಪಿ. ಮಾತನಾಡಿ ‘
ದೇಹದಾರ್ಢ್ಯ ಸ್ಪರ್ಧೆ ಕೂಡ ಕ್ರೀಡಾಸ್ಪೂರ್ತಿಯ ಪ್ರತೀಕ, ಕ್ರೀಡಾ ಸ್ಪೂರ್ತಿಯಿಂದ
ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಶುಭ ಹಾರೈಸಿದರು.ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ ಮಾತನಾಡಿ’ದೇಹದಾರ್ಢ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮೂಲಕ ಸುಳ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಲಾಗಿದೆ, ಈ ರೀತಿಯ ಕಾರ್ಯಕ್ರಮಗಳಿಗೆ ಎಲ್ಲರ ಬೆಂಬಲ, ಸಹಕಾರ ಅಗತ್ಯ ಎಂದು ಹೇಳಿದರು.ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ,ಅಗ್ನಿಶಾಮಕ ಠಾಣೆಯ ಉಪನಿರೀಕ್ಷಕ ಕಿರಣಕುಮಾರ್, ಉದ್ಯಮಿ ಅಶೋಕ್ ಪ್ರಭು, ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಅತಿಥಿಗಳಾಗಿ ಭಾಗವಹಿಸಿದ್ದರು.

ದೇಹದಾರ್ಢ್ಯ ಸ್ಪರ್ಧೆಯ ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ಸಂಘಟನಾ ಸಮಿತಿಯ ಕಾರ್ಯದರ್ಶಿ ವಿಷ್ಣುವರ್ಧನ್ ಬಳ್ಳಾಲ್ ವಂದಿಸಿದರು. ಶ್ರೀನಿಧಿ ಕೆರೆಮೂಲೆ ಪ್ರಾರ್ಥಿಸಿದರು.ವಿಜೇತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.ದೇಹದಾರ್ಢ್ಯ ಸ್ಪರ್ಧೆಯ ಸಂಘಟನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಪಾನತ್ತಿಲ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.
ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮುಕ್ತ ರಾಜ್ಯ ಮಟ್ಟದಲ್ಲಿ ಮಿಸ್ಟರ್ ಕರಾವಳಿ ಮತ್ತು ಮಿಸ್ಟರ್ ಕರಾವಳಿ ಮೆನ್ ಫಿಸಿಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಮಿಸ್ಟರ್ ತುಳುನಾಡು ಮತ್ತು ಮಿಸ್ಟರ್ ತುಳುನಾಡು ಮೆನ್ ಫಿಸಿಕ್ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ.ಶಾರ್ಟ್, ಮೀಡಿಯಂ, ಟಾಲ್, ಸೂಪರ್ ವಿಭಾಗದ ಗ್ರೂಪ್ ವಿಭಾಗದ ಸ್ಪರ್ಧೆಗಳು ನಡೆಯಲಿದೆ. ವಿವಿಧ ವಿಭಾಗಗಳಲ್ಲಿ ವಿಜೇತರಿಗೆ ನಗದು, ಟ್ರೋಫಿ, ಮೆಡಲ್, ಪ್ರಮಾಣ ಪತ್ರ ನೀಡಲಾಗುವುದು.
ಸುಳ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮಿಸ್ಟರ್ ಕರಾವಳಿ 2026 ರಾಜ್ಯ ಮಟ್ಟದ ದೇಹದ ಮತ್ತು ಪುರುಷರ ಮೈಕಟ್ಟು ಸ್ಪರ್ಧೆ ಹಾಗೂ ಮಿಸ್ಟರ್ ತುಳುನಾಡು 2026 ಜಿಲ್ಲಾ ಮಟ್ಟದ ದೇಹದ ಮತ್ತು ಪುರುಷರ ಮೈಕಟ್ಟು ಸ್ಪರ್ಧೆ ಏರ್ಪಡಿಸಲಾಗಿದೆ.ವಿಜೇತರಿಗೆ ಒಟ್ಟು 1,67,000 ರೂ ಮೊತ್ತದ ಬಹುಮಾನ ನೀಡಲಾಗುತ್ತಿದ್ದು ರಾಜ್ಯ ಮಟ್ಟದ ದೇಹದಾರ್ಢ್ಯ ಮತ್ತು ಪುರುಷರ ಮೈಕಟ್ಟು ಸ್ಪರ್ಧೆ,ಜಿಲ್ಲಾ ಮಟ್ಟದ ದೇಹದಾರ್ಢ್ಯ ಮತ್ತು ಪುರುಷರ ಮೈಕಟ್ಟು ಸ್ಪರ್ಧೆಗಳಿಗೆ ಕರಾವಳಿ ಮತ್ತು ಇತರ ಪ್ರದೇಶಗಳಿಂದ ಕ್ರೀಡಾಪಟುಗಳು ಆಗಮಿಸಿದ್ದಾರೆ.












