ಸುಳ್ಯ: ಅಗಲಿದ ಸುಳ್ಯದ ಅರ್ಎಸ್ಎಸ್ ಕಾರ್ಯಕರ್ತರಾದ ಧನಂಜಯ ವಾಗ್ಲೆ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮ ಸುಳ್ಯದ ಸಿ.ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಬಿಜೆಪಿ ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ
ಹೇಮಂತ್ ಕಂದಡ್ಕ, ಕೆ.ಕೆ ಬಾಲಕೃಷ್ಣ ಮತ್ತು ದಾಮೋದರ ಮಂಚಿ ನುಡಿನಮನ ಸಲ್ಲಿಸಿದರು. ಧನಂಜಯ ವಾಗ್ಲೆಯವರ ಸಂಘಟನಾ ಬದ್ಧತೆ ಮತ್ತು ತುರ್ತುಪರಿಸ್ಥಿತಿ ಯಂತಹ ಕಾಲದಲ್ಲಿ ಅವರ ಹೋರಾಟವನ್ನು ಸ್ಮರಿಸಿಕೊಂಡರು.
ಆರ್ಎಸ್ಎಸ್ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ ಕುಸುಮಧರ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸಿ.ಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ,
ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ,ಪ್ರದ್ಯುಮ್ನ ಉಬರಡ್ಕ, ರಾಜೇಶ್ ಶೆಟ್ಟಿ ಮೇನಾಲ ,ಸಂಘಟನೆ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.














