ಸುಳ್ಯ:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ (ಎಸ್ವೈಎಸ್) ನೇತೃತ್ವದಲ್ಲಿ ಸುಳ್ಯದಲ್ಲಿ ಬೃಹತ್ ಸೌಹಾರ್ದ ಸಂಚಾರ ನಡೆಯಿತು.
ಕುಂದಾಪುರದಿಂದ ಹೊರಟ ಸೌಹಾರ್ದ ಸಂಚಾರ ಯಾತ್ರೆ ಸುಳ್ಯದಲ್ಲಿ ಬೃಹತ್ ಸೌಹಾರ್ದ ಯಾತ್ರೆಯೊಂದಿಗೆ ಸಮಾಪನಗೊಂಡಿತು. ಸರ್ವ ಧರ್ಮದ ಪ್ರಮುಖರು ಕೈಜೋಡಿಸಿ ನಡೆಯುವುದರೊಂದಿಗೆ ಸೌಹಾರ್ದತೆಯ ಸಂದೇಶ ಸಾರಿದರು. ಸುಳ್ಯಕ್ಕೆ ಸಂಜೆ ಆಗಮಿಸಿದ
ಯಾತ್ರೆಗೆ ಸೌಹಾರ್ದ ಸಂಚಾರ ಸ್ವಾಗತ ಸಮಿತಿಯ ಪದಾಧಿಕಾರಿಗಳು ಸ್ವಾಗತ ನೀಡಿದರು. ಬಳಿಕ ಸುಳ್ಯ ಬಸ್ ನಿಲ್ದಾಣದ ಬಳಿಯಿಂದ ಗಾಂಧಿನಗರ ತನಕ ಸೌಹಾರ್ದ ಸಂಚಾರ ಯಾತ್ರೆ ನಡೆಯಿತು. ಮಳೆಯನ್ನೂ ಲೆಕ್ಕಿಸದೆ ನೂರಾರು ಮಂದಿ ಭಾಗವಹಿಸಿದ್ದರು.ಹಿಂದು, ಮುಸ್ಲಿಂ, ಕ್ರೈಸ್ತ ಸೇರಿ ವಿವಿಧ ಧರ್ಮದ ಪ್ರಮುಖರು ಭಾಗವಹಿಸಿ ಯಾವುದೇ ಧರ್ಮದವರು ಆಗುವುದರೊಂದಿಗೆ ಇವೆಲ್ಲಕ್ಕಿಂತ ಮೊದಲು ಮಾನವರಾಗಿ ಎಂಬ ಸಂದೇಶ ವನ್ನು ಸಾರುತ್ತಾ ಯಾತ್ರೆಯಲ್ಲಿ ಭಾಗವಹಿಸಿದ್ದರು.

ಸಮಾರೋಪ ಸಮಾರಂಭ:
ಗಾಂಧಿನಗರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸರ್ವ ಧರ್ಮಗಳ ಗುರುಗಳು, ಪ್ರಮುಖರು, ಸಾಮಾಜಿಕ, ಧಾರ್ಮಿಕ ಮುಖಂಡರು ಭಾಗವಹಿಸಿದರು.ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಥ್ ಜಿ,ಗುತ್ತಿಗಾರು ಹಾಗೂ ನೆಟ್ಟಣ ಹಾಗೂ ಬೆಳ್ತಂಗಡಿ ಧರ್ಮ ಪ್ರಾಂತ್ಯ ಜನ ಸಾಮಾನ್ಯ ಆಯೋಗದ ನಿರ್ದೇಶಕರಾದ ಫಾದರ್ ಆದರ್ಶ್ ಜೋಸೆಫ್,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ, ಎಂ.ವೆಂಕಪ್ಪ ಗೌಡ, ಎಂ.ಬಿ.ಸದಾಶಿವ,ಎಸ್ವೈಎಸ್ ರಾಜ್ಯಾಧ್ಯಕ್ಷ
ಬಶೀರ್ ಸಅದಿ ಪೀಣ್ಯ,ಪ್ರಧಾನ ಕಾರ್ಯದರ್ಶಿಅಬೂಬಕ್ಕರ್ ಸಿದ್ದೀಕ್ ಮೊಂಟುಗುಳಿ, ಖಜಾಂಜಿ ಮನ್ಸೂರ್ ಅಲಿ, ಮಾಜಿ ರಾಜ್ಯಾಧ್ಯಕ್ಷ
ಹಾಫಿಲ್ ಸಅದಿ ಕೊಂಡಂಗೇರಿ ಮತ್ತಿತರರು ಮಾತನಾಡಿದರು. ‘ಭಾರತ ವೈವಿಧ್ಯತೆಯಲ್ಲಿ

ಏಕತೆಯನ್ನು ಸಾರುವ ದೇಶ.ಈ ದೇಶದ ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರೂ ತಮ್ಮ ಧರ್ಮದ ಆಧಾರದಲ್ಲಿ ಬದುಕಿ ಮತ್ತೊಂದು ಧರ್ಮವನ್ನು ಗೌರವಿಸಿ, ಪ್ರೀತಿ, ವಿಶ್ವಾಸದಿಂದ ಬದುಕಿದರೆ ಈ ದೇಶದಲ್ಲಿ ಶಾಂತಿ, ನೆಮ್ಮದಿ, ಸಹೋದರತೆ ಬೆಳೆಯುತ್ತದೆ ಎಂದು ಹೇಳಿದರು.
ಕರಾವಳಿ ಕರ್ನಾಟಕವನ್ನು ಒಂದು ಸೌಹಾರ್ದ ಬೀಡನ್ನಾಗಿ ರೂಪಿಸಲು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ‘ಹೃದಯ ಹೃದಯಗಳನ್ನು ಬೆಸೆಯಬೇಕು ಎಂದು ಪ್ರಮುಖರು ಕರೆ ನೀಡಿದರು. ಸೌಹಾರ್ದ ಸಂಚಾರ ಸ್ವಾಗತ ಸಮಿತಿ ಚೆಯರ್ಮೆನ್ ಮಹಮ್ಮದ್ ಕುಂಞಿ ಗೂನಡ್ಕ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು, ಪಿ.ಎಸ್.ಗಂಗಾಧರ, ಕೆ.ಗೋಕುಲ್ದಾಸ್, ಇಕ್ಬಾಲ್ ಎಲಿಮಲೆ, ಡಾ.ಸುಂದರ ಕೇನಾಜೆ, ಬೆಟ್ಟ ಜಯರಾಮ ಭಟ್, ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಸಿದ್ದಿಕ್ ಕೊಕ್ಕೊ, ಶಾಹುಲ್ ಹಮೀದ್ ಕುತ್ತಮೊಟ್ಟೆ, ರಾಜು ಪಂಡಿತ್, ನಂದರಾಜ ಸಂಕೇಶ್, ಭವಾನಿಶಂಕರ ಕಲ್ಮಡ್ಕ, ಅಬೂ ಸಾಲಿ, ಸೌಹಾರ್ದ ಸಂಚಾರ ಸ್ವಾಗತ ಸಮಿತಿಯ

ಚೆಯರ್ಮೆನ್ ಮಹಮ್ಮದ್ ಕುಂಞಿ ಗೂನಡ್ಕ, ಸಮಿತಿಯ
ವೈಸ್ ಚೆಯರ್ಮೆನ್ ಕೆ.ಎಂ.ಮುಸ್ತಫ ಜನತಾ,
ಜನರಲ್ ಕನ್ವೀನರ್ ಅಬೂಬಕ್ಕರ್ ಅಡ್ಕಾರ್, ಫಿನಾನ್ಸ್ ಸೆಕ್ರೆಟರಿ ಮೂಸಾ ಕುಂಞಿ ಪೈಂಬೆಚ್ಚಾಲ್, ವೈಸ್ ಕನ್ವೀನರ್ ಅಬ್ದುಲ್ ಹಮೀದ್ ಸುಣ್ಣಮೂಲೆ,
ಕೋ-ಆರ್ಡಿನೆಟರ್ ಸಿದ್ದೀಕ್ ಗೂನಡ್ಕ, ಎಸ್ವೈಎಸ್ ವಲಯ ಅಧ್ಯಕ್ಷ ಅಬ್ದುಲ್ ಲತೀಫ್ ಝೌಹರಿ, ಎಸ್ವೈಎಸ್ ಜಿಲ್ಲಾ ಕ್ಯಾಬಿನೆಟ್ ಸದಸ್ಯ ಹಸೈನಾರ್ ವಳಲಂಬೆ,ಎಸ್ವೈಎಸ್ ಪ್ರಮುಖರಾದ

ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಅಬ್ದುರ್ರಶೀದ್ ಝೈನಿ ಖಾಮಿಲ್ ಸಖಾಫಿ,ಮಲ್ಲೂರ್ ಸಅದಿ ,ಸಿರಾಜುದ್ದೀನ್ ಸಖಾಫಿ ಕಿನ್ಯ,ಹಂಝ ಮದನಿ ಬೆಳ್ತಂಗಡಿ,ಸಲೀಂ ಕನ್ಯಾಡಿ,ಅಶ್ರಫ್ ಸಖಾಫಿ ಮಾಡನ್ನೂರ್ ಶಾಫಿ ಸಖಾಫಿ ಕೊಕ್ಕಡ,ಹಸೈನಾರ್ ಆನೆಮಾಲ್ ಉಪಸ್ಥಿತರಿದ್ದರು.ಸ್ವಾಗತ ಸಮಿತಿಯ ವೈಸ್ ಚೆಯರ್ಮೆನ್ ಕೆ.ಎಂ.ಮುಸ್ತಫ ಸ್ವಾಗತಿಸಿ,ಜನರಲ್ ಕನ್ವೀನರ್ ಅಬೂಬಕ್ಕರ್ ಅಡ್ಕಾರ್ ವಂದಿಸಿದರು.
ಜುಲೈ 14ರಂದು ಕುಂದಾಪುರದಿಂದ ಆರಂಭಗೊಂಡ ಸೌಹಾರ್ದ ಸಂಚಾರದ ಭಾಗವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 15ಕೇಂದ್ರಗಳಲ್ಲಿ ಸೌಹಾರ್ದ ಸಂಚಾರ ಯಾತ್ರೆ, ಸಭಾ ಕಾರ್ಯಕ್ರಮ ನಡೆಯಿತು.














