ಕೋಲ್ಚಾರ್: ರಾಜ್ಯ ಪ್ರಶಸ್ತಿ ವಿಜೇತ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರ್ ಇಲ್ಲಿ ಸರಕಾರ ಅನುಮತಿಸಿದ ದ್ವಿಭಾಷಾ ಶಿಕ್ಷಣ ಪದ್ಧತಿಯಲ್ಲಿ ಆಂಗ್ಲ ಭಾಷಾ ತರಗತಿ ಉದ್ಘಾಟನೆ ಗೊಂಡಿತು.
ಆಂಗ್ಲ ಭಾಷೆ ಒಂದನೇ ತರಗತಿಯನ್ನು ಅಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ್ ಉದ್ಘಾಟಿಸಿದರು, ಆಲೆಟ್ಟಿ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ದೀಪ ಪ್ರಜ್ವಲನೆ ಗೊಳಿಸಿದರು. ಸಭಾಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು ವಹಿಸಿದರು, ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಕಣಕ್ಕೂರು, ಶಂಕರಿ ಕೊಲ್ಲರ ಮೂಲೆ, ಪಾಲನಾ ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಸಹಕಾರಿ ಸಂಘದ ನಿರ್ದೇಶಕ ಚಿದಾನಂದ ಕೋಲ್ಚಾರು, ನಿವೃತ್ತ ಶಿಕ್ಷಕಿ ನಾಗವೇಣಿ ಕೊಯಿಂಗಾಜೆ, ಅಂಗನವಾಡಿ ಕಾರ್ಯಕರ್ತೆ ರತ್ನಾವತಿ ವಾಲ್ತಾಜೆ ಉಪಸ್ಥಿತ ರಿದ್ದರು. ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂಸಿ ಮತ್ತು ಪಾಲನ ಸಮಿತಿ ಸದಸ್ಯರು, ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು ಶಾಲಾ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ ಸ್ವಾಗತಿಸಿ ಶಿಕ್ಷಕ ಮನು ಕುಮಾರ್ ವಂದಿಸಿದ್ದರು, ಶಿಕ್ಷಕರದ ರಂಗನಾಥ್ ಎಂ ಎಸ್ ಮತ್ತು ಜಲಜಾಕ್ಷಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು.














