ಮೈಸೂರು:ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಜಯ ಸಾಧಿಸಿದರು. ಸರ್ಜಿ 24,111 ಮತಗಳ
ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ಸರ್ಜಿ 37,627 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ 13,516 ಮತ ಪಡೆದರು.
ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ರಘುಪತಿ ಭಟ್ 7039 ಮತ ಗಳಿಸಿದರು. 66,497 ಸಾವಿರ ಮತಗಳ ಎಣಿಕೆ ಮಾಡಿದ್ದು. 5115 ಮತಗಳು ತಿರಸ್ಕೃತಗೊಂಡವು.