ಸುಳ್ಯ: ರಾತ್ರಿಯ ವೇಳೆ ಅರಳಿ ಕಂಪು ಸೂಸುವ ‘ರಾತ್ರಿ ರಾಣಿ’ ಎಂಬ ಹೆಸರು ಗಳಿಸಿರುವ ಬ್ರಹ್ಮ ಕಮಲ ಅರಳಿ ಕಂಪು ಸೂಸಿದೆ.ಸಾಮಾಜಿಕ ಕಾರ್ಯಕರ್ತ ಭವಾನಿಶಂಕರ ಕಲ್ಮಡ್ಕ ಅವರ ಮನೆಯಲ್ಲಿ ಬ್ರಹ್ಮಕಮಲ ಅರಳಿ ನಿಂತಿದೆ. ಭವಾನಿಶಂಕರ ಕಲ್ಮಡ್ಕ ಹೂವಿನ ಸುಂದರ ಚಿತ್ರ ತೆಗೆದು ‘ಸುಳ್ಯ ಮಿರರ್’ಗೆ ಕಳುಹಿಸಿದ್ದಾರೆ.ಬ್ರಹ್ಮಕಮಲ ಸುಂದರವಾದ ಹೂವು ಹಿಮಾಲಯದ ತಪ್ಪಲಿನಲ್ಲಿ ಕಂಡುಬರುತ್ತದೆ. ಈ ಪುಷ್ಪ ಸೂರ್ಯಕಾಂತಿ ಹೂವಿನ ಕುಟುಂಬದ
ಸದಸ್ಯ ಎಂದೂ ಹೇಳಲಾಗುತ್ತದೆ. ಇದು ಪೌರಾಣಿಕ ಮತ್ತು ಧಾರ್ಮಿಕ ಮಹತ್ವಗಳನ್ನು ಹೊಂದಿದೆ. ಸೃಷ್ಟಿಯ ದೇವನಾದ ಬ್ರಹ್ಮನು, ಧ್ಯಾನ ಮಾಡುವಾಗ ಈ ಹೂವಿನ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದನು ಎನ್ನುವ ನಂಬಿಕೆಯಿದೆ. ಈ ಪವಿತ್ರ ಹೂವು ವರ್ಷಕ್ಕೊಮ್ಮೆ ರಾತ್ರಿ ಮಾತ್ರ ಅರಳುತ್ತದೆ. ವರ್ಷದಲ್ಲಿ ಒಂದು ರಾತ್ರಿ ಮಾತ್ರ
ಚಿತ್ರಗಳು:ಭವಾನಿಶಂಕರ ಕಲ್ಮಡ್ಕ
ಅರಳುವ ಈ ಪುಷ್ಪ ಮುಂಜಾನೆಯಾಗುತ್ತಿದ್ದಂತೆ ಮುದುಡಿ ಹೋಗುತ್ತವೆ. ಬ್ರಹ್ಮಕಮಲವು ಅದರ ಸೌಂದರ್ಯ ಮತ್ತು ಮಂಗಳಕರ ಸ್ವಭಾವದಿಂದ ಗಮನ ಸೆಳೆಯುತ್ತದೆ. ಬ್ರಹ್ಮ ಕಮಲಕ್ಕೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳು ಮತ್ತು ಕಥೆಗಳಿವೆ.
ಬ್ರಹ್ಮ ಕಮಲವು ವರ್ಷಕ್ಕೆ ಒಮ್ಮೆ ಮಾತ್ರ ಅರಳುವ ಹೂವು ಆದ ಕಾರಣ ಈ ಹೂವಿನ ಅರಳುವ ದಿನಕ್ಕಾಗಿ ಎಲ್ಲರೂ ಎದುರು ನೋಡುತ್ತಿರುತ್ತಾರೆ. ಅಪೂರ್ವ ಸೌಂದರ್ಯದಂತೆ ಧಾರ್ಮಿಕ, ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವವುಳ್ಳ ಹೂವು ಇದಾಗಿದೆ.