ಸುಳ್ಯ: ಪ.ಜಾತಿ, ಪ.ಪಂಗಡ ಕಾರ್ಯಕ್ರಮದಡಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಂದು ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕುವೆತ್ತೋಡಿ, ಕುದ್ಮಾರು ಪ.ಜಾತಿ ಕಾಲೋನಿ ರಸ್ತೆಗೆ 6 ಲಕ್ಷ, ಸವಣೂರು ಗ್ರಾಮದ ಮುಂಡೆತ್ತಡ್ಕ ಪ.ಜಾತಿ ಕಾಲೋನಿ ರಸ್ತೆಗೆ 5.25 ಲಕ್ಷ, ಗೋಳಿತೊಟ್ಟು ಕೀನ್ಯಡ್ಕ ಪ.ಜಾತಿ ಕಾಲೋನಿ ರಸ್ತೆಗೆ
5.25 ಲಕ್ಷ, ಸುಳ್ಯ ತಾಲೂಕು ಬೆಳ್ಳಾರೆ ಬೂಡು ಪಾಟಾಜೆ ಪ.ಜಾತಿ ಕಾಲೋನಿ ರಸ್ತೆಗೆ 8 ಲಕ್ಷ, ಮುರುಳ್ಯ ಗ್ರಾಮದ ಕಾಪುತ್ತಡ್ಕ ಪ.ಜಾತಿ ಕಾಲೋನಿ ರಸ್ತೆಗೆ 15 ಲಕ್ಷ, ನೆಲ್ಲೂರು ಕೆಮ್ರಾಜೆ ಗ್ರಾಮದ ಎಲಿಮಲೆ-ಕಜೆ ಪ.ಜಾತಿ ಕಾಲೋನಿ ರಸ್ತೆಗೆ 5.25 ಲಕ್ಷ, ಅಜ್ಜಾವರ ಗ್ರಾಮದ ಮುಳ್ಯ ಮಠ ಪ.ಜಾತಿ ಕಾಲೂನಿ ರಸ್ತೆಗೆ 5.25 ಲಕ್ಷ ಸೇರಿ ಒಟ್ಟು 50 ಲಕ್ಷ ಅನುದಾನ ಬಿಡುಗಡೆಯಾಗಿದೆ.
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರು – ಮಾಣಿಮರ್ದು ಪರಿಶಿಷ್ಟ ಪಂಗಡ ರಸ್ತೆ ಅಭಿವೃದ್ಧಿಗೆ ರೂಪಾಯಿ 10 ಲಕ್ಷ, ಆಲೆಟ್ಟಿ ಗ್ರಾಮದ ಪರಿವಾರಕಾನ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 6 ಲಕ್ಷ, ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ – ಏರ್ಮೆಟ್ಟಿ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 7 ಲಕ್ಷ, ಮಂಡೆಕೋಲು ಗ್ರಾಮದ ಕುಂಡಪಾರೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 5.50 ಲಕ್ಷ, ಕೊಲ್ಲಮೊಗ್ರ ಗ್ರಾಮದ ಬೆಂಡೋಡಿ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 6 ಲಕ್ಷ, ಮಡಪ್ಪಾಡಿ ಗ್ರಾಮದ ಕಡ್ಯ ಪರಿಶಿಷ್ಟ ಪಂಗಡದ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 5.50 ಲಕ್ಷ, ಕಲ್ಮಡ್ಕ ಗ್ರಾಮದ ಅಜ್ಜಿಗುಡ್ಡೆ ಅಳಕೆ ಪುಚ್ಚಮ್ಮ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 10 ಲಕ್ಷ ದಂತೆ ಒಟ್ಟು ರೂಪಾಯಿ 50 ಲಕ್ಷ ಅನುದಾನ ಸೇರಿ ಒಟ್ಟು ಒಂದು ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರಾದ ಭಾಗೀರಥಿ ಮುರುಳ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.