ಬಾಳಿಲ: ಬಾಳಿಲ ಕೊರಗ ತನಿಯ ಸಾನಿಧ್ಯದಲ್ಲಿ ನಡೆದ ಕೊರಗ ತನಿಯ ದೈವದ ನೇಮೋತ್ಸವದ ಸಂದರ್ಭದಲ್ಲಿ ಸ್ವಾಮಿ ಕೊರಗತನಿಯ ಬಾಳಿಲ ಮಣ್ಣ್ದ ಮಹಾ ಸತ್ಯ ತುಳು ಭಕ್ತಿಗೀತೆ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು. ಧ್ವನಿ ಸುರುಳಿಯನ್ನು

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ತಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಬಿಡುಗಡೆ ಮಾಡಿದರು. ಸಾಹಿತ್ಯ ರಚನೆ ಮಾಡಿದ ರಕ್ಷಿತ್ ಮಂಚಿಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಧ್ವನಿ ಸುರುಳಿ ಬಿಡುಗಡೆ ಮಾಡಿದ ಡಾ.ದೇವಿಪ್ರಸಾದ್ ಕಾನತ್ತೂರು, ಪುಷ್ಪಾ ಡಿ ಪ್ರಸಾದ್ ದಂಪತಿಗಳನ್ನು ಬಾಳಿಲ ಕೊರಗ ತನಿಯ ಸಾನಿಧ್ಯದ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಜಯರಾಮ ಬಾಳಿಲ, ರಕ್ಷಿತ್ ಮಂಚಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
