ಸುಳ್ಯ:ಸುಳ್ಯದ ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಎಲ್ಲಾ ರೀತಿಯ ಆಧುನಿಕ ದಂತ ಚಿಕಿತ್ಸೆಗಳು ಅತ್ಯಂತ ಕಡಿಮೆ ಖರ್ಚಿನಲ್ಲಿ ಲಭ್ಯವಿದೆ.ಇದೀಗ ಎಲ್ಲಾ ತರಹದ ಹಲ್ಲು ಜೋಡಣೆಯ ಸೌಲಭ್ಯದ ಇಂಪ್ಲಾಂಟ್ ಡಿಪಾರ್ಟ್ಮೆಂಟ್ ಆರಂಭಗೊಳ್ಳುವುದರೊಂದಿಗೆ ಕಾಲೇಜಿನ ಚಿಕಿತ್ಸೆ,ಅಧ್ಯಯನಕ್ಕೆ ಇನ್ನಷ್ಟು ಆಧುನಿಕ ಸ್ಪರ್ಶ ಬಂದಿದೆ. ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಎಒಎಲ್ಇ ಕಮಿಟಿ ಬಿ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಹೇಳಿದ್ದಾರೆ.ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ನೂತನ
ಅತ್ಯಾಧುನಿಕ ಇಂಪ್ಲಾಂಟ್ ಡಿಪಾರ್ಟ್ಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.ಎಒಎಲ್ಇ ಕಮಿಟಿ ಬಿ ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್, ನಿರ್ದೇಶಕಿ ಡಾ.ಅಭಿಜ್ಞಾ, ಡೆಂಟಲ್ ಕಾಲೇಜಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮೌರ್ಯ ಆರ್. ಕುರುಂಜಿ,ಮಂಗಳೂರು
ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ನ ಉಪನ್ಯಾಸಕರಾದ ಡಾ.ರಕ್ಷಿತ್ ಹೆಗ್ಡೆ ಅತಿಥಿಗಳಾಗಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಮೋಕ್ಷಾ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಎಂ.ಎಂ.ದಯಾಕರ್, ಡಾ.ಶೈಲಾ ಪೈ ಡಾ.ಕೃಷ್ಣ ಪ್ರಸಾದ, ಡಾ.ಸುಹಾಸ್ ರಾವ್, ಡಾ. ಜಯಪ್ರಸಾದ್ ಆನೆಕಾರ್, ಡಾ. ಪ್ರಸನ್ನ ಕುಮಾರ್, ಎಒಎಲ್ಇ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿಟಿ, ಕೆವಿಜಿ ಐಟಿಐ ಪ್ರಾಂಶುಪಾಲ ದಿನೇಶ್ ಮಡ್ತಿಲ, ಕೆವಿಜಿ ಡೆಂಟಲ್ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಡಾ.ವಜಿದಾ ಕಾರ್ಯಕ್ರಮ ನಿರೂಪಿಸಿದರು.















