ನವದೆಹಲಿ: ಐಪಿಎಲ್ನ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಪಂದ್ಯ ರೋಚಕ ಟೈ ಆಯಿತು. ಬಳಿಕ ಸೂಪರ್ ಓವರ್ನಲ್ಲಿ ಫಲಿತಾಂಶ ನಿರ್ಣಯಿಸಲಾಯಿತು. ಸೂಪರ್ ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ದಾಖಲಿಸಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಎರಡು ವಿಕೆಟ್ ನಷ್ಟಕ್ಕೆ 11 ರನ್ ಬಾರಿಸಿತು. ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ 4 ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ
13 ರನ್ ಬಾರಿಸಿ ಅಮೋಘ ಗೆಲುವು ದಾಖಲಿಸಿತು.ಕೆ.ಎಲ್.ರಾಹುಲ್ ಹಾಗೂ ಟಿಸ್ಟನ್ ಸ್ಟಬ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ ಸೂಪರ್ ಗೆಲುವು ದಾಖಲಿಸಿದರು.ಎರಡೂ ತಂಡಗಳು ಸಮನಾದ ಸ್ಕೋರ್ ಗಳಿಸಿದ ಕಾರಣ ಸೂಪರ್ ಓವರ್ನಲ್ಲಿ ಫಲಿತಾಂಶ ನಿರ್ಧರಿಸಲಾಯಿತು.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ಕಲೆ ಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದಾಗ ಪಂದ್ಯ ಟೈ ಆಯಿತು. ಕೊನೆಯ ಓವರ್ನಲ್ಲಿ ರಾಜಸ್ಥಾನ ಗೆಲುವಿಗೆ 9 ರನ್ ಅಗತ್ಯ ಇತ್ತು. ಉತ್ತಮ ಬೌಲಿಂಗ್ ನಡೆಸಿದ ಮಿಚೆಲ್ ಸ್ಟಾರ್ಕ್ ಕೇವಲ 8 ರನ್ ಮಾತ್ರ ನೀಡಿದರು. ಇದರಿಂದ ಪಂದ್ಯ ಟೈ ಆಯಿತು.
ರಾಜಸ್ಥಾನ ಪರ ಯಶಸ್ವಿ ಜೈಸ್ಚಾಲ್ ಹಾಗೂ ನಿತೀಶ್ ರಾಣಾ ಅರ್ಧ ಶತಕ ಸಿಡಿಸಿದರು. ಜೈಸ್ವಾಲ್ 37 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ರಾಣಾ28 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು.
ಜೈಸ್ವಾಲ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಮೊದಲ ವಿಕೆಟ್ಗೆ 8.1 ಓವರ್ಗಳಲ್ಲಿ 76 ರನ್ ಉತ್ತಮ ಆರಂಭ ನೀಡಿದರು. ಸ್ಯಾಮ್ಸನ್ 19 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದರು. ಕೊನೆಯಲ್ಲಿ ಧ್ರುವ್ ಜುರೆಲ್ ಹಾಗೂ ಶಿಮ್ರಾನ್ ಹೆಟ್ಮೇರ್ ಹೋರಾಟ ನಡೆಸಿದರೂ ಪಂದ್ಯ ಟೈ ಆಗಿ ಪರಿಣಮಿಸಿತು. ಜುರೆಲ್ 2 ಸಿಕ್ಸರ್ ಒಳಗೊಂಡು 26 ರನ್ ಹಾಗೂ ಹೆಟ್ಮೇರ್ ಒಂದು ಸಿಕ್ಸರ್ ನೆರವಿನಿಂದ 15 ರನ್ ಬಾರಿಸಿದರು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಪರ ಅಭಿಷೇಕ್ ಪೊರೇಲ್ 49, ಕೆ.ಎಲ್. ರಾಹುಲ್ 38, ಟ್ರಿಸ್ಟನ್ ಸ್ಟಬ್ಸ್ 34, ಅಕ್ಸರ್ ಪಟೇಲ್ 34 ಹಾಗೂ ಅಶುತೋಶ್ ಶರ್ಮಾ ಔಟಾಗದೆ 15 ರನ್ ಕಲೆ ಹಾಕಿದರು.ರಾಜಸ್ಥಾನ ಪರ ಬೌಲಿಂಗ್ ಮಾಡಿದ ಜೋಫ್ರಾ 2 ವಿಕೆಟ್ ಕಿತ್ತರು. ಜತೆಗೆ ಮಹೀಶ್ ಮತ್ತು ಹೇಸರಂಗ ತಲಾ ಒಂದು ವಿಕೆಟ್ ಕಿತ್ತರು.