ಸುಳ್ಯ: ಮಾಯಾವಿ ಕುದ್ರೋಳಿ ಗಣೇಶ್ ಅವರಿಂದ ಜಾದೂ ಲೋಕದ ವಿಸ್ಮಯ ‘ಮೈಂಡ್ ಮಿಸ್ಟರಿ’ ಕಾರ್ಯಕ್ರಮ ಎ.26 ರಂದು ಶನಿವಾರ ಸಂಜೆ 6.30ಕ್ಕೆ ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆಯಲಿದೆ. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅವರ ಸಂಯೋಜನೆಯನಲ್ಲಿ ಕಾರ್ಯಕ್ರಮ ಮೂಡಿ ಬರಲಿದೆ. ‘ಮೈಂಡ್ ಮಿಸ್ಟರಿ’ ಮೂಲಕ ಸುಪ್ತ ಮನಸ್ಸಿನ ಶಕ್ತಿಯ ಅನಾವರಣ ಆಗಲಿದೆ. ಇದು ಜಾದೂ ರಂಗ ಹೊಚ್ಚ ಹೊಸ ಪ್ರಯೋಗ ವಿಜ್ಞಾನ – ಮನಶಾಸ್ತ್ರ ಹಾಗೂ ಮ್ಯಾಜಿಕ್ ಕಲೆಯ ಸಂಗಮದ ‘ಮೆಂಟಲಿಸಮ್’ ಎಂಬ
ಈ ಹೊಸ ಪ್ರಯೋಗ. ಜಾದೂ ಲೋಕದಲ್ಲಿ ವಿಸ್ಮಯ ಸೃಷ್ಠಿಸಿದೆ.ಮೈಂಡ್ ರೀಡಿಂಗ್, ಭವಿಷ್ಯವಾಣಿ,ಸಮ್ಮೋಹಿನಿ,ಎನ್ ಎಲ್ ಪಿ,ಟೆಲಿಪತಿ, ಅಗೋಚರ ಸಂಪರ್ಕ, ಆರನೇ ಇಂದ್ರಿಯದ ಅನುಭೂತಿಯ ರಂಗರೂಪಾತ್ಮಕ ಪ್ರಸ್ತುತಿ.
ಮನೋವಿಜ್ಞಾನದ ಕಲೆ ಮೆಂಟಲಿಸಮ್:
ಮೆಂಟಲಿಸಮ್ ಅನ್ನುವುದು ವಿಜ್ಞಾನ ಮನಶಾಸ್ತ್ರ- ಜಾದೂ ಕಲೆಯ ಸಂಗಮದ ಒಂದು ಮನರಂಜನಾ ಕಲಾ ಪ್ರಕಾರವಾಗಿದೆ. ಮೆಂಟಲಿಸ್ಟ್ ಕುದ್ರೋಳಿ ಗಣೇಶ್ ಅವರು ಪ್ರೇಕ್ಷಕರ ಮನಸ್ಸಿನ ಭಾವ, ವ್ಯಕ್ತಿತ್ವದ ವರ್ತನೆ, ಮನೋ ಕಲ್ಪನೆಯ ಸ್ವರೂಪವನ್ನು ಅಭ್ಯಸಿಸಿ ತರ್ಕಕ್ಕೆ ನಿಲುಕದ ಪ್ರಯೋಗಗಳನ್ನು ಪ್ರದರ್ಶಿಸುತ್ತಾರೆ. ಮೇಲ್ನೋಟಕ್ಕೆ ಇದು ಅಲೌಕಿಕ ಅಥವಾ ಅತೀಂದ್ರಿಯ ಸಾಮರ್ಥ್ಯದ ಹಾಗೆ ಭಾಸವಾದರೂ ಇದು ನಿಜವಾಗಿರದೆ ಮನಸ್ಸಿಗೆ ಉಂಟಾಗುವ ಭ್ರಮೆಯಾಗಿರುತ್ತೆ.

ಮನೋ ಭ್ರಮೆಗಳ ಅಚ್ಚರಿ ಮೈಂಡ್ ಮಿಸ್ಟರಿ:
ಮೆಂಟಲಿಸಮ್ ಕಲೆಯ ಹೊಚ್ಚ ಹೊಸ ಪ್ರಯೋಗವಾಗಿರುವ ” ಮೈಂಡ್ ಮಿಸ್ಟರಿ ” ಪ್ರದರ್ಶನದ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ನೀಡಲು ಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಸಜ್ಜಾಗಿದ್ದಾರೆ. ಮೈಂಡ್ ಮಿಸ್ಟರಿ – ಮನಸ್ಸಿನ ತರ್ಕವನ್ನೇ ಪ್ರಶ್ನಿಸುವ ಹತ್ತು ಹಲವು ಮನೋ ಭ್ರಮೆಗಳಿಂದ ತುಂಬಿರುವ 120 ನಿಮಿಷಗಳ ಪ್ರದರ್ಶನವಾಗಿದೆ. ಮನಸ್ಸನ್ನು ಓದುವ ಮೈಂಡ್ ರೀಡಿಂಗ್, ಮನಸ್ಸು ಮನಸ್ಸುಗಳ ಮಧ್ಯದ ಅಗೋಚರ ಸಂಪರ್ಕದ ಟೆಲಿಪತಿ, ವ್ಯಕಿಯ ವರ್ತನೆಯ ಮೇಲೆ ಪ್ರಭಾವ ಬೀರುವ ಎನ್.ಎಲ್.ಪಿ, ಮುಂದಾಗುವ ವಿಚಾರಗಳನ್ನು ಮೊದಲೇ ಸೂಚಿಸುವ ಭವಿಷ್ಯವಾಣಿ ಮುಂತಾದ ಹಲವು ಚಮತ್ಕಾರಗಳು ಮೈಂಡ್ ಮಿಸ್ಟರಿಯಲ್ಲಿ ತೆರೆದುಕೊಳ್ಳಲಿದೆ.

ಮಾಯಾವಿ ಕುದ್ರೋಳಿ ಗಣೇಶ್:
ಕುದ್ರೋಳಿ ಗಣೇಶ್ ಅವರು ಮೂವತ್ತಕ್ಕೂ ಅಧಿಕ ವರ್ಷಗಳಿಂದ ಜಾದೂರಂಗದಲ್ಲಿದ್ದು ದೇಶದಾದ್ಯಂತ ಹಾಗೂ ವಿದೇಶದ 15 ರಾಷ್ಟ್ರಗಳಲ್ಲಿ 2,300 ಕ್ಕೂ ಹೆಚ್ಚು ಜಾದೂ ಪ್ರದರ್ಶನ ನೀಡಿದ್ದಾರೆ. ವಿವಿಧ ಜಾದೂ ಸ್ಪರ್ಧೆಗಳಲ್ಲಿ ಭಾಗವಹಿಸಿ 11 ರಾಷ್ಟ್ರೀಯ ಜಾದೂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜಾದೂ,ಜಾನಪದ, ರಂಗಭೂಮಿ, ಸಂಗೀತಗಳ ಸಮ್ಮೇಳನದ

ನವರಸಪೂರ್ಣ ಜಾದೂ ಶೈಲಿಯನ್ನು ಹುಟ್ಟುಹಾಕಿದ್ದಾರೆ. ವಿಸ್ಮಯ ಜಾದೂ, ಮಸ್ತ್ ಮ್ಯಾಜಿಕ್, ತುಳುನಾಡು ಜಾದೂ, ತುಳುನಾಡು ತುಡರ್ ಚೆಂಡು, ಹರಿಕಥೆ ಜಾದೂ, ನವದುರ್ಗಾ ವಿಸ್ಮಯ, ಸ್ವಚ್ಛತೆಗಾಗಿ ಜಾದೂ, ಶಿಕ್ಷಣಕ್ಕಾಗಿ ಜಾದೂ, ಮೈಂಡ್ ಮ್ಯಾಜಿಕ್ ಮುಂತಾದ ನವನವೀನ ಜಾದೂ ಪ್ರಯೋಗಗಳ ಮೂಲಕ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ. ಇಂಡಿಯನ್ ಮ್ಯಾಜಿಕ್ ಅಕಾಡಮಿ ಕೊಡಮಾಡುವ ಪ್ರತಿಷ್ಠಿತ ” ಗೊಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿ.ಐ.ಪಿ ಹಾಗೂ ಗೊಲ್ಡ್ ಕ್ಲಾಸ್ ಪ್ರವೇಶ ಪಾಸ್ ಗಳಿಗಾಗಿ ದೂಎವಾಣಿ ಸಂಖ್ಯೆ :
+91 94480 12141
+91 7019018622
ನ್ನು ಸಂಪರ್ಕಿಸಬಹುದು.16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪ್ರವೇಶ ಇಲ್ಲ ಎಂದು
ಕಾರ್ಯಕ್ರಮದ ಸಂಯೋಜಕರಾದ ಪಿ.ಬಿ.ಸುಧಾಕರ ರೈ ತಿಳಿಸಿದ್ದಾರೆ.