ಮಧುರೈ: ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿಯಾಗಿ ಕೇರಳ ಮಾಜಿ ಸಚಿವ ಎಂ.ಎ.ಬೇಬಿ ಅವರನ್ನು ಆಯ್ಕೆ ಮಾಡಲಾಗಿದೆ.
ತಮಿಳುನಾಡಿನ ಮಧುರೈನಲ್ಲಿ ನಡೆಯುತ್ತಿರುವ ಪಕ್ಷದ 24ನೇ ಮಹಾ ಅಧಿವೇಶನದಲ್ಲಿ ಈ ಆಯ್ಕೆ ನಡೆದಿದೆ.1954ರಲ್ಲಿ ಕೇರಳದ
ಪ್ರಕ್ಕುಳಂನಲ್ಲಿ ಜನಿಸಿದ ಎಂ.ಎ.ಬೇಬಿ ಅವರು, ಶಾಲಾ ದಿನಗಳಲ್ಲಿಯೇ ಸಿಪಿಐ(ಎಂ)ನ ವಿದ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ(ಎಸ್ಎಫ್ಐ)ದ ‘ಕೇರಳ ಸ್ಟೂಡೆಂಟ್ ಫೆಡರೇಶನ್’ಗೆ ಸೇರ್ಪಡೆಗೊಂಡಿದ್ದರು. 2012ರಿಂದ ಸಿಪಿಐ(ಎಂ)ನ ಪಾಲಿಟ್ ಬ್ಯೂರೋದ ಸದಸ್ಯರೂ ಆಗಿದ್ದರು. 1986ರಿಂದ 1998 ರವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಎಂಎಸ್ ಬಳಿಕ ಕೇರಳದಿಂದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದವರು ಎಂ.ಎ.ಬೇಬಿ