ಮಂಡೆಕೋಲು: ನನ್ನ ಬೂತ್ ನಾನೇ ಅಭ್ಯರ್ಥಿ’ ಎಂಬ ಸಂಕಲ್ಪದೊಂದಿಗೆ ದ.ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರವಾಗಿ ಮಂಡೆಕೋಲು ಗ್ರಾಮದ ಮೂರೂರು – ದೇವರಗುಂಡ- ಕಾಪಿನಡ್ಕ (ಬೂತ್ -193 ) ಭಾಗದಲ್ಲಿ ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿ ಅದ್ಯಕ್ಷರಾದ ಸದಾನಂದ ಮಾವಜಿ ಹಾಗೂ
ಸುಳ್ಯ ವಿಧಾನಸಭಾ ಕ್ಷೇತ್ರದ ಮಾಜಿ ಅಭ್ಯರ್ಥಿ ಡಾ. ರಘು ಇವರ ನೇತೃತ್ವದಲ್ಲಿ ಮನೆ ಮನೆ ಭೇಟಿ ನೀಡಿ ಬಿರುಸಿನ ಮತ ಯಾಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಂಡೆಕೋಲು ಗ್ರಾಮದ ಕಾಂಗ್ರೆಸ್ ಉಪಾಧ್ಯಕ್ಷರಾದ ಯೂಸುಫ್ ಹಾಜಿ ಮುರೂರು ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರಾದ ರಫೀಕ್ ಮುರೂರು,ಬಾಬು, ಅಬ್ದುಲ್ಲಾ ಮುರೂರು, ಹಮೀದ್ ಮುರೂರು, ತಸ್ರೀಫ್, ಅಶ್ರಫ್ ನೌಫಲ್ ಖಾನ್, ಹನೀಫ್,ಅಜಿತ್, ಸುಕುಮಾರ, ಮಸೂದ್ ಮೊದಲಾದವರು ಉಪಸ್ಥಿತರಿದ್ದರು