ಪಂಜ: ದಕ್ಷಿಣ ಕನ್ನಡವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ರೂಪಿಸುವುದು, ಸೌಹಾರ್ದತೆಯ ನಾಡು ಕಟ್ಟುವುದು ನಮ್ಮ ಧ್ಯೇಯ. ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಂಜದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಕಾಂಗ್ರೆಸ್ ಸರಕಾರದ ಸಾಧನೆಗಳು ಹಲವಿವೆ. ಅದರಲ್ಲೂ ಗ್ಯಾರೆಂಟಿ ಯೋಜನೆ ಜನರಿಗೆ ನೇರವಾಗಿ ತಲುಪಿವೆ. ಆದ್ದರಿಂದ
ಧೈರ್ಯವಾಗಿ ಜನರ ಬಳಿಗೆ ತೆರಳಿ ಮತ ಕೇಳಿ.
ಪ್ರಚಾರ ಸಮಿತಿ ಉಸ್ತುವಾರಿಯಾದ ಬಿ.ರಮಾನಾಥ ರೈ ರವರು ಮತಯಾಚನೆ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಅಡ್ಪಂಗಾಯ, ಟಿ.ಎಂ.ಶಹೀದ್ ತೆಕ್ಕಿಲ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಮುಖಂಡರುಗಳಾದ ಜಿ.ಕೃಷ್ಣಪ್ಪ, ನಿತ್ಯಾನಂದ ಮುಂಡೋಡಿ, ಜಿ.ಕೃಷ್ಣಪ್ಪ, ಡಾ.ರಘು, ಎನ್.ಜಯಪ್ರಕಾಶ್ ರೈ, ವೆಂಕಪ್ಪ ಗೌಡ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಇಸಾಕ್ ಸಾಹೇಬ್ ಪಾಜಪಳ್ಳ, ರಾಜೀವಿ ಆರ್.ರೈ, ಡಾ.ದೇವಿ ಪ್ರಸಾದ್ ಕಾನತ್ತೂರ್, ಜಯರಾಮ ಭಟ್ ಬೆಟ್ಟ, ಬೆಟ್ಟ ರಾಜಾರಾಮ್ ಭಟ್, ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ , ವಿಜಯಕುಮಾರ್ ಸೊರಕೆ, ತಿರುಮಲೇಶ್ವರಿ ಅರ್ಭಡ್ಕ, ಲೀಲಾ ಮನಮೋಹನ್, ಅಬ್ದುಲ್ ಗಫೂರ್, ಹಾಜಿರಾ ಕಲ್ಮಡ್ಕ,ಮಹೇಶ್ ಕುಮಾರ್ ಕರಿಕ್ಕಳ, ಲಕ್ಷ್ಮಣ ಗೌಡ ಬೊಳ್ಳಾಜೆ ,ಇಸ್ಮಾಯಿಲ್ ಪಡ್ಪಿನಂಗಡಿ, ರಜಿತ್ ಭಟ್ ಪಂಜಬೀಡು,ಸತ್ಯನಾರಾಯಣ ಭಟ್ ಕಾಯಂಬಾಡಿ ಮೊದಲಾದವರು ಉಪಸ್ಥಿತರಿದ್ದರು. ಪಿ ಸಿ ಜಯರಾಮ ಸ್ವಾಗತಿಸಿದರು. ಭರತ್ ಮುಂಡೋಡಿ ವಂದಿಸಿದರು.
ನಿಂತಿಕಲ್ಲಿನಲ್ಲಿ ಸಭೆ:
ನಿಂತಿಕಲ್ಲಿನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿದರು.
ಕಾಂಗ್ರೆಸಿನ ಜಿಲ್ಲಾ ಚುನಾವಣಾ ಉಸ್ತುವಾರಿ ರಮಾನಾಥ ರೈ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ, ಮಮತಾ ಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಅಡ್ಪಂಗಾಯ, ಟಿ.ಎಂ. ಶಹೀದ್ ತೆಕ್ಕಿಲ್, ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಂ, ಜಿ. ಕೃಷ್ಣಪ್ಪ, ಡಾ. ರಘು, ಆಮ್ ಆದ್ಮಿ ಮುಖಂಡ ಅಶೋಕ್ ಎಡಮಲೆ, ಹಮೀದ್ ಕುತ್ತಮೊಟ್ಟೆ, ಸುಜಯ ಕೃಷ್ಣ, ರಾಧಾಕೃಷ್ಣ ಬೊಳ್ಳರು, ಇಸಾಕ್ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.
ಬೆಳ್ಳಾರೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ:
ಬೆಳ್ಳಾರೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ
ಪ್ರಚಾರ ಸಮಿತಿ ಉಸ್ತುವಾರಿ ಬಿ.ರಮಾನಾಥ ರೈ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮಾತನಾಡಿ ಮತ ಯಾಚನೆ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಅಡ್ಪಂಗಾಯ, ಟಿ.ಎಂ.ಶಹೀದ್ ತೆಕ್ಕಿಲ್ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಮುಖಂಡರುಗಳಾದ ನಿತ್ಯಾನಂದ ಮುಂಡೋಡಿ, ಜಿ.ಕೃಷ್ಣಪ್ಪ, ಡಾ.ರಘು, ಎನ್.ಜಯಪ್ರಕಾಶ್ ರೈ, ವೆಂಕಪ್ಪ ಗೌಡ, ಶಾಹುಲ್ ಹಮೀದ್ ಕುತ್ತಮೊಟ್ಟೆ,
ರಾಜೀವಿ ಆರ್.ರೈ, ಅನಿಲ್ ರೈ,ವಿಠಲದಾಸ್,ಜಗನ್ನಾಥ ಪೂಜಾರಿ ಮುಕ್ಕೂರು,ಸಚಿನ್ ರಾಜ್ ಶೆಟ್ಟಿ,ಮುಸ್ತಾಫ,ಅಬ್ದುಲ್ ರಹಿಮಾನ್ ಹಾಗೂ ಪಕ್ಷದ ಕಾರ್ಯಕರ್ತರು , ಮತದಾರರು ಉಪಸ್ಥಿತರಿದ್ದರು.