ಮುಂಬಯಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಹಿಳೆಯರ ಪ್ರೀಮಿಯರ್ ಲೀಗ್ನ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ಗೆ 9 ವಿಕೆಟ್ ಜಯ. ಸ್ಮೃತಿ ಮಂಧಾನಾ ನೇತೃತ್ವದ ಆರ್ಸಿಬಿಗೆ ಇದು ಸತತ ಎರಡನೇ ಸೋಲಾಗಿದೆ.ಟಾಸ್ ಗೆದ್ದ ಆರ್ಸಿಬಿ ತಂಡ ಮೊದಲು ಬ್ಯಾಟ್ ಮಾಡಿ 18.2 ಓವರ್ಗಳಲ್ಲಿ 155 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಮುಂಬಯಿ ತಂಡ
14.2 ಓವರ್ಗಳಲ್ಲಿ ಒಂದು ವಿಕೆಟ್ ಕಳೆಧೂಕೊಂಡು 159 ರನ್ ಬಾರಿಸಿ ಗೆಲುವು ಸಾಧಿಸಿತು. ಹೇಲಿ ಮ್ಯಾಥ್ಯೂಸ್ 38 ಎಸೆತಗಳಲ್ಲಿ ಅಜೇಯ 77 ರನ್ ಬಾರಿಸಿ ಮತ್ತು 3 ವಿಕೆಟ್ ಪಡೆದು ಆಲ್ ರೌಂಡ್ ಪ್ರದರ್ಶನ ನೀಡಿ ಗೆಲುವಿನ ರೂವಾರಿ ಎನಿಸಿಕೊಂಡರು. ಮುಂಬಯಿ ಪರ ನ್ಯಾಟ್ ಸ್ಕೀವರ್ ಬ್ರಂಟ್ (ಅಜೇಯ 55) ಅರ್ಧ ಶತಕ ಬಾರಿಸಿದರೆ, ಆರಂಭಿಕ ಬ್ಯಾಟರ್ ಯಸ್ತಿಕಾ ಭಾಟಿಯಾ 23 ರನ್ಗಳ ಕೊಡುಗೆ ಕೊಟ್ಟರು. ಮೊದಲು
ಬ್ಯಾಟಿಂಗ್ ನಡೆಸಿದ ಆರ್ಸಿಬಿ ಪರ ಸ್ಮೃತಿ ಮಂಧಾನಾ (23) ಹಾಗೂ ಸೋಫಿ ಡಿವೈನ್ (16) ಮೊದಲ ವಿಕೆಟ್ಗೆ 39 ರನ್ ಬಾರಿಸಿ ವಿಶ್ವಾಸ ಮೂಡಿಸಿದರು. ಆದರೆ, ಆ ಬಳಿಕ ಸತತವಾಗಿ ವಿಕೆಟ್ ಕಳೆದುಕೊಂಡು 43 ರನ್ಗೆ 4 ವಿಕೆಟ್ ನಷ್ಟ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿತು. ರಿಚಾ ಘೋಷ್ (28), ಕನಿಕಾ ಅಹುಜಾ (22), ಶ್ರೇಯಾಂಕಾ ಪಾಟೀಲ್ (23) ಹಾಗೂ ಮೇಗನ್ ಶೂಟ್ (20) ಉಪಯುಕ್ತ ಕೊಡುಗೆ ನೀಡಿದರು.