ಪೇರಡ್ಕ:ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ-ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿಗೆ ಕಂಪ್ಯೂಟರ್, ಪ್ರಿಂಟರ್ ಮತ್ತು ಕುಡಿಯುವ ನೀರಿನ ಘಟಕವನ್ನು
ಪೇರಡ್ಕ ಜಮಾಅತ್ ದುಬೈ ಸಮಿತಿಯ ಅಧ್ಯಕ್ಷ ರಹೀಂ ಪೇರಡ್ಕರವರು ಜಮಾಅತ್ನ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಅವರಿಗೆ ಹಸ್ತಾಂತರಿಸಿದರು. ಖತೀಬರಾದ ನಈಂ ಫೈಝಿ ದುವಾ ನೆರವೇರಿಸಿದರು. ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಟಿ.ಬಿ ಹನೀಫ್, ಕೆ.ಎಮ್ ಉಸ್ಮಾನ್ ಉಪಸ್ಥಿತರಿದ್ದರು.