ಕಲ್ಲಪಳ್ಳಿ:ಭಾರತ್ ಲಜ್ನ ಮಲ್ಟಿ ಸ್ಟೇಟ್ ಹೌಸಿಂಗ್ ಕೋಆಪರೇಟಿವ್ ಸೊಸೈಟಿ ಮತ್ತು ಚಂದ್ರಗಿರಿ ಇಕೋ ಟೂರಿಸಂ ಯೋಜನೆಯ ಸಾಮಾಜಿಕ ಅಭಿವೃದ್ಧಿ ಕಾರ್ಯದ ಭಾಗವಾಗಿ ಕಲ್ಲಪಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ವಿತರಿಸಲಾಯಿತು. ಪನತ್ತಡಿ ಪಂಚಾಯತ್ ಅಧ್ಯಕ್ಷ ಪಿ. ರಘುನಾಥ್ ಅಧ್ಯಕ್ಷತೆ ವಹಿಸಿದ್ದರು.ಬಿಎಲ್ಎಂ ಸೊಸೈಟಿಯ
ಸೀನಿಯರ್ ಡೈರೆಕ್ಟರ್ ಶಿಬಿ ವಿ.ಕೆ, ಎಕ್ಸಿಕ್ಯೂಟಿವ್ ಡೈರೆಕ್ಟರ್ ಸುನಿಲ್ ಕುಮಾರ್, ಪ್ರಾಜೆಕ್ಟ್ ಮ್ಯಾನೇಜರ್ ನಿಧೀಶ್, ಸೀನಿಯರ್ ಕೋಆರ್ಡಿನೇಟರ್ ಶಾಜಿ ಸೆಬಾಸ್ಟಿಯನ್ ವಿತರಣೆ ನೆರವೇರಿಸಿದರು.
ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಭವ್ಯ ಜಯರಾಜ್, ವೇಣುಗೋಪಾಲ್, ಶಿಬು, ಮಾಜಿ ಪಂಚಾಯತ್ ಸದಸ್ಯ ರಾಧಾಕೃಷ್ಣನ್ ಕಲ್ಲಪಳ್ಳಿ, ಪಿಟಿಎ ಅಧ್ಯಕ್ಷ ಪ್ರವೀಣ್ ಕಮ್ಮಾಡಿ, ಶಾಲಾ ಮುಖ್ಯೋಪಾಧ್ಯಾಯ ವಿಠಲ ಅಡ್ವಾಳ್, ಎಡಿಎಸ್ ಅಧ್ಯಕ್ಷೆ ಮೋಹನವಲ್ಲಿ ಅವರು ಉಪಸ್ಥಿತರಿದ್ದರು.
ಬಿಎಲ್ಎಂ ಸೊಸೈಟಿಯ ಪದಾಧಿಕಾರಿಗಳು ಇಕೋ ಟೂರಿಸಂ ಯೋಜನೆಯ ಕುರಿತು ಮಾಹಿತಿ ನೀಡಿದರು.











