ಗ್ಲಾಸ್ಗೊ: ಸ್ಕಾಟ್ಲೆಂಡ್ನ ಗ್ಲಾಸ್ಗೊದಲ್ಲಿ ನಡೆದ 2026ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಬಿದ್ದಿದೆ. ಈ ಸಮಾರಂಭದಲ್ಲಿ 2030ರಲ್ಲಿ ಆತಿಥ್ಯ ವಹಿಸಲಿರುವ ಭಾರತದ ಅಹಮದಾಬಾದ್ ನಗರಕ್ಕೆ ಕಾಮನ್ವೆಲ್ತ್ ಕ್ರೀಡಾಕೂಟದ ಧ್ವಜ ಹಾಗೂ
ದಂಡ (ಬ್ಯಾಟನ್) ಅಧಿಕೃತವಾಗಿ ಹಸ್ತಾಂತರಗೊಂಡಿದೆ. 2030ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಭಾರತವು ಜಗತ್ತಿಗೆ ಆಹ್ವಾನವನ್ನು ನೀಡಿತು.ಮಹಿಳೆಯರ 57 ಕೆ.ಜಿ ವಿಭಾಗದ ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಗೆದ್ದ ಜೈಸ್ಮಿನ್ ಲಂಬೋರಿಯಾ ಸಮಾರೋಪ ಸಮಾರಂಭದಲ್ಲಿ ಭಾರತದ ತ್ರಿವರ್ಣ ಧ್ವಜಧಾರಿಯಾಗಿದ್ದರು.ಈ ಬಾರಿ 13 ಚಿನ್ನ 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳೊಂದಿಗೆ ಒಟ್ಟು 39 ಪದಕಗಳನ್ನು ಗೆದ್ದ ಭಾರತ, ನಾಲ್ಕನೇ ಸ್ಥಾನದೊಂದಿಗೆ ಅಭಿಯಾನವನ್ನು ಕೊನೆಗೊಳಿಸಿತು. ಈ ಪೈಕಿ ಅಥ್ಲೆಟಿಕ್ಸ್ನಲ್ಲಿ 16 ಹಾಗೂ ಬಾಕ್ಸಿಂಗ್ನಲ್ಲಿ 10 ಪದಕಗಳನ್ನು ಗೆದ್ದಿದೆ.












