ಸುಳ್ಯ:ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಪ್ರಯುಕ್ತ ಸುಳ್ಯ ಗಣೇಶೋತ್ಸವದಲ್ಲಿ ಹಣತೆ ಬೆಳಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಸುಳ್ಯ ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವದಲ್ಲಿ ಗಣೇಶನ ಮುಂದೆ
ಹಣತೆಗಳನ್ನು ಬೆಳಗಿ ಪ್ರಧಾನಮಂತ್ರಿಯವರ ದೀರ್ಘಯುಷ್ಯ, ಮತ್ತು ಅರೋಗ್ಯ ವೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾರಾಯಣ ಶಾಂತಿನಗರ, ಪ್ರಮುಖರಾದ ಉಮೇಶ್ ಪಿ ಕೆ, ಸೋಮನಾಥ ಪೂಜಾರಿ, ಚಂದ್ರಶೇಖರ ಅಡ್ಪಂಗಾಯ,ನವೀನ್ ಕಾಯರ್ತೋಡಿ, ರಾಜೇಶ್ ಮೇನಾಲ, ಗುರುದತ್ ಶೇಟ್, ಶಶಿಕಲಾ ನೀರಬಿದಿರೆ,ರಂಜಿತ್ ಜಯನಗರ, ವಿಶ್ವನಾಥ್ ಕುಂಚಡ್ಕ ಮತ್ತಿತರರು ಉಪಸ್ಥಿತರಿದ್ದರು.








