ದುಬೈ: ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರು ಐಸಿಸಿ ಪುರುಷರ, ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಘೋಷಿಸಿದೆ.
ಬೂಮ್ರಾ ಅವರು ಈ ವರ್ಷ ಆಡಿರುವ
13 ಟೆಸ್ಟ್ ಪಂದ್ಯಗಳಲ್ಲಿ 14.92 ಸರಾಸರಿಯಲ್ಲಿ 71 ವಿಕೆಟ್ಗಳನ್ನು ಪಡೆದಿದ್ದಾರೆ. ಇದು ಈ ವರ್ಷ ಬೌಲರ್ ಒಬ್ಬರ ಅತ್ಯುತ್ತಮ ಸಾಧನೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೊದಲ ನಾಲ್ಕು ಟೆಸ್ಟ್ಗಳಲ್ಲಿ ಅವರು 30 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಟಿ20 ವಿಶ್ವಕಪ್ನಲ್ಲೂ ಬೂಮ್ರಾ ಅವರ ಅಮೋಘ ಬೌಲಿಂಗ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಅಮೆರಿಕ–ವೆಸ್ಟ್ ಇಂಡೀಸ್ನಲ್ಲಿ ಈ ವರ್ಷದ ಮಧ್ಯದಲ್ಲಿ ನಡೆದ ಆ ವಿಶ್ವಕಪ್ನಲ್ಲಿ ಎಂಟು ಪಂದ್ಯಗಳಿಂದ 15 ವಿಕೆಟ್ಗಳನ್ನು ಪಡೆದಿದ್ದರು.