ಕಡಬ:ಸುಳ್ಯ ಮಂಡಲ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಡಬದಲ್ಲಿ ತಿರಂಗ ಯಾತ್ರೆ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ತಿರಂಗ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸುಲೋಚನಾ ಜಿ.ಕೆ.ಭಟ್ ಮುಖ್ಯ ಭಾಷಣ ಮಾಡಿದರು.ಬಿಜೆಪಿ ಸುಳ್ಯ ಮಂಡಲ
ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಬಿಜಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ಹರೀಶ್ ಕಂಜಿಪಿಲಿ, ರಾಕೇಶ್ ರೈ ಕೆಡೆಂಜಿ, ಆಶಾ ತಿಮ್ಮಪ್ಪ ಗೌಡ, ಪುಲಸ್ಯ ರೈ, ವಿನಯಕುಮಾರ್ ಕಂದಡ್ಕ, ಗಣೇಶ್ ಉದನಡ್ಕ, ಇಂದಿರಾ ಬಿ.ಕೆ., ತೇಜಸ್ವಿನಿ ಕಟ್ಟಪುಣಿ, ಶ್ರೀಕೃಷ್ಣ ಎಂ.ಆರ್., ವಾಡ್ಯಪ್ಪ ಗೌಡ ಎರ್ಮಾಯಿಲ್, ಪುಷ್ಪಾ ಮೇದಪ್ಪ,ಅಶೋಕ್ ಕುಮಾರ್ ಪಿ,ದಯಾನಂದ ಗೌಡ ಪೊಯ್ಯೆತ್ತಡ್ಡ, ಶ್ರೀಕಾಂತ್ ಮಾವಿನಕಟ್ಟೆ, ಗಂಗಾಧರ ಪೆರಿಯಡ್ಕ, ಮದುಸೂಧನ

ಕೊಂಬಾರು, ರವಿಪ್ರಸಾದ್ ಶೆಟ್ಟಿ, ರಾಮಚಂದ್ರ ನಾಯ್ಕ ಏಣಿತಡ್ಕ, ಶಶಿಕಲಾ ನೀರಬಿದ್ರೆ, ಗುಣವತಿ ಕೊಲ್ಲಂತ್ತಡ್ಕ, ಫಯಾಜ್ ಕೆನರಾ ಮತ್ತಿತರರು ಉಪಸ್ಥಿತರಿದ್ದರು.ಬಿಜೆಪಿ ಸುಳ್ಯ ಮಂಡಲ
ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಸ್ವಾಗತಿಸಿದರು. ಕಡಬ ಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್.ಕೆ.ವಂದಿಸಿದರು. ಕಡಬ ಎ.ಪಿ.ಎಂ.ಸಿ ಕಟ್ಟಡದ ಬಿಯಿಂದ ಹೊರಟು,ಪೇಟೆಯಲ್ಲಿ ಸಂಚರಿಸಿ, ಕಡಬ ಸಿಎ ಬ್ಯಾಂಕ್ ಕಟ್ಟಡದ ಬಳಿ ಸಮಾಪನಗೊಂಡು ಸಭೆ ನಡೆಯಿತು.





































