ಬೆಳ್ಳಾರೆ:ಬೆಳ್ಳಾರೆ ಗ್ರಾಮದ ನೇಲ್ಯಮಜಲು ಪುಡ್ಕಾಜೆ ಮತ್ತು ಕುರುಂಬುಡೇಲು ಸಂಪರ್ಕಿಸುವ ಕಾಲು ಸೇತುವೆ
ನಿರ್ಮಾಣ ಮಾಡಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯದರ್ಶಿ ನವೀನ್ ಫೆರಾವೊ ನೇತೃತ್ವದಲ್ಲಿ ಸಂಬಂಧಪಟ್ಟ
ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸೇತುವೆ ನಿರ್ಮಾಣಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಈ ಹಿನ್ನಲೆಯಲ್ಲಿ ಪುನಾಃ ಮನವಿ ಸಲ್ಲಿಸಲಾಗಿದೆ. ಸೇತುವೆ ನಿರ್ಮಾಣ ಕಾಮಗಾರಿ ಮಾಡದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ನವೀನ್ ಫೆರಾವೊ ತಿಳಿಸಿದ್ದಾರೆ.
















