ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ಶಿಲ್ಪಿ, ಡಾ. ಬಿ ಆರ್ ಅಂಬೇಡ್ಕರ್ 135ನೇ ಜಯಂತಿ ಆಚರಣೆಯನ್ನು ನೆನೆಗುದಿಗೆ ಬಿದ್ದಿರುವ ಸುಳ್ಯದ ಅಂಬೇಡ್ಕರ್ ಭವನದ ವಠಾರದಲ್ಲಿ ಆಚರಿಸಲಾಯಿತು.ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಅಂಬೇಡ್ಕರ್ ಭವನ ಪೂರ್ತಿ ಮಾಡಲು ಪ್ರಯತ್ನ ನಡೆಸಲಾಗುವುದು ಎಂದು ಸಭೆಯಲ್ಲಿ
ಮಾತನಾಡಿದ ಕಾಂಗ್ರೆಸ್ ಮುಖಂಡರ ಹೇಳಿದ್ದಾರೆ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ ‘ಸುಳ್ಯದ ಈ ಅಂಬೇಡ್ಕರ್ ಭವನ ನಿರ್ಮಾಣ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದು ಸುಳ್ಯಕ್ಕೆ ಕಪ್ಪು ಚುಕ್ಕೆಯಾಗಿದೆ. ಕಾಂಗ್ರೆಸ್ ಸರಕಾರ ಈಗಾಗಲೇ ಉಳಿದಿರುವ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಪ್ರಯತ್ನ ನಡೆಸಲಾಗುವುದು ಎಂದರು.
ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ,ದ ಕ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ,
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಾತನಾಡಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸಂವಿಧಾನ ಪೀಠಿಕೆ ಬೋಧಿಸಿದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ಎಸ್ ಗಂಗಾಧರ, ಶಾಹುಲ್ ಹಮೀದ್ ಕುತ್ತಮೊಟ್ಟೆ,ರಂಜಿತ್ ರೈ ಮೇನಾಲ, ವಿಜೇಶ್ ಹಿರಿಯಡ್ಕ,ಕೆ ಗೋಕುಲ್ ದಾಸ್, ನಂದರಾಜ್ ಸಂಕೇಶ್, ಶಾಫಿ ಕುತ್ತಮೊಟ್ಟೆ, ಶಶಿಧರ್ ಎಂ ಜೆ, ರಾಜು ಪಂಡಿತ್, ಜಿ ಕೆ ಹಮೀದ್, ಎಸ್ ಕೆ ಹನೀಪ್, ಕೇಶವ ಮೊರಂಗಲ್ಲು, ಆನಂದ ಬೆಳ್ಳಾರೆ, ಆದಂ ಕಡಬ, ಆಶೀಶ್ ಕೃಷ್ಣಪ್ಪ, ಗೀತಾ ಕೋಲ್ಚಾರ್, ಅನುಸೂಯ, ತಿರುಮಲೆಶ್ವರಿ, ಸುಂದರಿ ಮುಂಡಡ್ಕ, ಸಿದ್ದಿಕ್ ಕೊಕ್ಕೊ, ಶರೀಪ್ ಕಂಠಿ, ಡೇವಿಡ್ ಧೀರಾ ಕ್ರಾಸ್ತಾ, ರಕ್ಷಿತ್ ದೊಡ್ಡಡ್ಕ, ಚಂದ್ರನ್ ಕೂಟೆಲು, ಅರುಣಾಚಲಂ ಕೂಟೆಲು, ಶರವಣ ಬೆಂಗಮಲೆ, ಪ್ರೇಮಹರೀಶ್ವರನ್ ಗಾಂಧಿ, ಮಧುಸೂಧನ ಬೂಡು, ಅಬ್ಬಾಸ್.ಎ.ಬಿ , ಜಂಶೀರ್ ಸಾಲೆಕ್ಕಾರ್, ಮಂಜುನಾಥ್ ಮಡ್ತಿಲ ಉಪಸ್ಥಿತರಿದ್ದರು.ಕೆ.ಎಂ. ಮುಸ್ತಫಾ ಸ್ವಾಗತಿಸಿ ಮಹೇಶ್ ಬೆಳ್ಳಾರ್ಕರ್ ವಂದಿಸಿ ಭವಾನಿಶಂಕರ್ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.
















