ಗುತ್ತಿಗಾರು:ಗುತ್ತಿಗಾರು ಗ್ರಾಮ ಕಾಂಗ್ರೆಸ್ ಸಮಿತಿಯ ಸಭೆ ನಡೆಯಿತು.ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಗೋಪಾಲಕೃಷ್ಣ ದೇವಸ್ಯ, ಭರತ್ ಕನ್ನಡ್ಕ, ವರದರಾಜ್ ಬಳ್ಳಕ,ಗುರುವ ಆಚಳ್ಳಿ, ಹೇಮಂತ್ ಬಳ್ಳಕ, ಸಂತೋಷ್ ಬಳ್ಳಕ ಪಕ್ಷಕ್ಕೆ ಸೇರ್ಪಡೆಗೊಂಡರು.
ಗುತ್ತಿಗಾರು ಗ್ರಾಮ ಸಮಿತಿಯ ನೂತನ
ಅಧ್ಯಕ್ಷರಾಗಿ ಕೇಶವ ಹೊಸೊಳಿಕೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಡಿ.ಜೆ ಜನಾರ್ಧನ, ಉಪಾಧ್ಯಕ್ಷರಾಗಿ ಹಸೈನಾರ್ ವಳಲಂಬೆ, ಮೋಹನ್ ಹುಲಿಕೆರೆ, ಅಶೋಕ್ ಮೊಗ್ರ, ಗುರುವ ಆಚಳ್ಳಿ ಹಾಗೂ ಕಾರ್ಯದರ್ಶಿಗಳಾಗಿ ಗೋಪಾಲಕೃಷ್ಣ ದೇವಸ್ಯ, ಸತ್ಯನಾರಾಯಣ ಬಳ್ಳಕ, ರಂಜಿತ್ ಪೈಕ, ಭರತ್ ಕನ್ನಡ್ಕ ಅವರನ್ನು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕಗೊಳಿಸಲಾಯಿತು.
ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ,ಪ್ರಚಾರ ಸಮಿತಿ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ, ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಪರಮೇಶ್ವರ ಚಣಿಲ, ಮುಖಂಡರಾದ ಹರ್ಷಿತ್ ಗೌಡ ಕೊರಂಬಟ, ಪರಮೇಶ್ವರ ಕೆಂಬಾರೆ, ಪರಶುರಾಮ ಚಿಲ್ತಡ್ಕ, ಜಯಪ್ರಕಾಶ್ ನೆಕ್ರಪ್ಪಾಡಿ, ರಕ್ಷಿತ್ ದೊಡ್ಡಡ್ಕ, ಶಶಿಧರ ಎಂ ಜೆ, ಸನತ್ ಮುಳುಗಾಡು, ಲಕ್ಷ್ಮೀಶ ಗಬ್ಬಲಡ್ಕ, ಅಚ್ಚುತ ಮಲ್ಕಜೆ, ಗೋಪಾಲಕೃಷ್ಣ ಪಿ.ಎಂ, ಕೆ ಗುಡ್ಡಪ್ಪ ಗೌಡ, ಹಸೈನಾರ್ ವಳಲಂಬೆ, ಮುರಳೀಧರ, ಗುರುವ, ಅಯ್ಯಪ್ಪನ್, ಚನಿಯ ಪುಲ್ಲಡ್ಕ, ಪುರುಷೋತ್ತಮ ಬದಿಯಡ್ಕ, ಅಭಿಜಿತ್ ಕೆಂಬಾರೆ,ರಂಜಿತ್ ಪೈಕ, ಗಂಗಾಧರ ಅಡ್ಡನಪಾರೆ, ಹರಿಪ್ರಸಾದ್ ಬಳ್ಳಕ, ಸತ್ಯನಾರಾಯಣ ಬಳ್ಳಕ, ಸಂತೋಷ್ ಬಳ್ಳಕ, ಹೇಮಂತ್ ಬಳ್ಳಕ, ವರದರಾಜ ಬಳ್ಳಕ, ಗಿರಿಧರ ಕೋನೆಕಾಣ, ಎಂ.ಎಸ್ ಸಿದ್ದಾರ್ಥ, ಧನಂಜಯ ಜೆ, ರಾಜಶೇಖರ್ ಮೇದಿನಡ್ಕ, ಅಶೋಕ್ ಎಂ, ನಾಗೇಶ ಬಿ, ಮೋಹನ್ ಇ ಹೆಚ್ ಮೊದಲಾದವರು ಉಪಸ್ಥಿತರಿದ್ದರು. ದಿನೇಶ್ ಸರಸ್ವತಿಮಹಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.









